ಬೆಂಗಳೂರು: ಬೈಕ್ ಚಾಲನೆ ವೇಳೆ ರೀಲ್ಸ್ ಮಾಡಿದಕ್ಕೆ ದಂಡ, ದಂಡ ಕಟ್ಟಿದ್ದಕ್ಕೆ ಮತ್ತೊಂದು ರೀಲ್ಸ್ ಮಾಡಿದ ಯುವಕ!

Update: 2022-06-29 13:32 GMT

ಬೆಂಗಳೂರು, ಜೂ.29: ವಾಹನ ಚಾಲನೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಮಾಡುವ ಸವಾರರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಸಂಚಾರ ಪೊಲೀಸರು, ದೂರು ದಾಖಲಿಸಿಕೊಂಡು ದಂಡ ವಸೂಲಿಗೆ ಮುಂದಾಗಿದ್ದಾರೆ.

ಕಳೆದ ಒಂದೇ ವರ್ಷದಲ್ಲಿ ಒಟ್ಟು 44 ಪ್ರಕರಣಗಳು ದಾಖಲಾಗಿದ್ದು, ಸಂಚಾರ ಪೊಲೀಸರು, ವಿಡಿಯೊಗಳನ್ನು ಗಮನಿಸಿ ಸ್ವಯಂ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. 

ಇತ್ತೀಚಿಗೆ ಯುವಕನೊಬ್ಬ ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ ಮಾಡಿ ವಿಡಿಯೊ ಮಾಡಿದ್ದು ಇದನ್ನು ಗಮನಿಸಿದ ಪೊಲೀಸರು ಈತನಿಗೆ 17,500 ಸಾವಿರ ರೂಪಾಯಿ ದಂಡ ವಸೂಲಿ ಮಾಡಿ ಎಚ್ಚರಿಕೆ ನೀಡಿದ್ದರು. ಆದರೆ, ಆತ ಪುನಃ ರೀಲ್ಸ್ (REELS VIDEO) ಮಾಡಿ ದಂಡ ಪಾವತಿ ಮಾಡುವ ಕುರಿತು ತಿಳಿಸಿ, ನಗೆಪಾಟಲಿಗೆ ಗುರಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News