ಜು.1ರಿಂದ ನೇರ ನೇಮಕಾತಿಗೆ ಆಗ್ರಹಿಸಿ ಮುಷ್ಕರ

Update: 2022-06-29 13:30 GMT

ಮಂಗಳೂರು : ಸಫಾಯಿ ಕರ್ಮಚಾರಿಗಳಿಗೆ ಪೌರ ಕಾರ್ಮಿಕರ ಮಾದರಿಯಲ್ಲಿ ಗುತ್ತಿಗೆ ಪದ್ಧತಿ ಬದಲು ನೇರ ನೇಮಕಾತಿಗೆ ಆಗ್ರಹಿಸಿ ಜು.೧ರಿಂದ ಅನಿರ್ದಿಷ್ಟಾವಯ ಕಾಲ ಮುಷ್ಕರ ನಡೆಯಲಿದೆ ಎಂದು  ಸಫಾಯಿ ಕರ್ಮ ಚಾರಿಗಳ  ಸಂಘ ಕರಾವಳಿ ಭಾಗದ  ಸಂಚಾಲಕ ಬಿ.ಕೆ.ಅಣ್ಣಪ್ಪ ಹೇಳಿದರು.

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದ ಎಲ್ಲ ೩೧೪ ನಗರ ಸ್ಥಳೀಯ ಸಂಸ್ಥೆಗಳ ಕಸ ಸಾಗಿಸುವ ವಾಹನ ಚಾಲಕರು, ವಾಟರ್‌ಮೆನ್, ಡಾಟಾ ಅಪರೇಟರುಗಳನ್ನು ಯೂಜಿಡಿ ಕಾರ್ಮಿಕರು, ತ್ಯಾಜ್ಯ ಸಹಾಯಕರನ್ನು ಪೌರಕಾರ್ಮಿಕರ ಮಾದರಿಯಲ್ಲಿ ಗುತ್ತಿಗೆ ಪದ್ಧತಿ ಬದಲು ನೇರ ವೇತನಕ್ಕೆ ಒಳಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ ಎಂದರು.

ಈಗಾಗಲೇ ಪೌರ ಕಾರ್ಮಿಕರ ನೇಮಕಾತಿಗೆ ಒತ್ತಾಯಿಸಿ ರಾಜ್ಯವ್ಯಾಪ್ತಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘ ಕರೆ ನೀಡಿದೆ. ಈ ಮುಷ್ಕರಕ್ಕೆ ದ.ಕ. ಜಿಲ್ಲಾ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಯ ಹೊರ ಗುತ್ತಿಗೆ ನೌಕರರು ಸಹಕಾರ ನೀಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಫಾಯಿ ಕರ್ಮಾಚಾರಿ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ,  ಮಂಗಳೂರು ವಲಯ ಅಧ್ಯಕ್ಷ ರಾದ ಚೆನ್ನಕೇಶವ ಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News