ಜು.೧:ವಿದ್ಯುತ್ ವ್ಯತ್ಯಯ

Update: 2022-06-29 14:35 GMT

ಮಂಗಳೂರು: ನಗರದ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ ಮಾರ್ಕೆಟ್ ಹಾಗೂ ಸೌತ್ ವಾರ್ಫ್ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.

ಹಾಗಾಗಿ ಜು.೧ರ ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ಲೇಡಿಗೋಷನ್‌ಆಸ್ಪತ್ರೆ, ಸೆಂಟ್ರಲ್ ಮಾರ್ಕೆಟ್, ಶಾಂತದುರ್ಗಾ, ಜೆಎಚ್‌ಎಸ್. ರಸ್ತೆ, ಪಿ.ಎಂ.ರಾವ್ ರೋಡ್, ಗೌರಿಮಠ ರೋಡ್, ರಾಘವೇಂದ್ರ ಮಠ ರೋಡ್ ಹಾಗೂ ಹ್ಯಾಮಿಲ್ಟನ್ ಸರ್ಕಲ್, ಬಂದರು ದಕ್ಕೆ, ಓಲ್ಡ್ ಪೋರ್ಟ್‌ಗೇಟ್, ಬದ್ರಿಯಾ ರೋಡ್, ಗೂಡ್‌ಶೆಡ್ ರಸ್ತೆ, ಬ್ಯಾಂಬು ಬಜಾರ್, ನೀರೇಶ್ವಲ್ಯ ರೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News