ಅಶ್ಯೆಖ್ ಅಸೈಯದ್ ಮುಹಮ್ಮದ್ ಮೌಲಾ ಜಲಾಲ್ ಮಸ್ತಾನ್ ಆಂಡ್ ನೇರ್ಚೆ

Update: 2022-06-29 14:41 GMT

ಮಂಗಳೂರು : ನಗರದ ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಬಳಿಯಲ್ಲಿ ದಫನಗೈಯಲ್ಪಟ್ಟ ಅಶ್ಯೆಖ್ ಅಸೈಯದ್ ಮುಹಮ್ಮದ್ ಮೌಲಾ ಜಲಾಲ್ ಮಸ್ತಾನ್ ಅಲ್‌ಬುಖಾರಿ (ಖ.ಸಿ)ರ 96ನೇ ಆಂಡ್ ನೇರ್ಚೆಯೂ ಇತ್ತೀಚೆಗೆ ನಡೆಯಿತು.

ದ.ಕ.ಜಿಲ್ಲಾ ಖಾಝಿ ಶೈಖುನಾ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್‌ಅಝ್ಹರಿ ನೇತೃತ್ವದಲ್ಲಿ ಕೂಟು ಝಿಯಾರತ್, ಖತಮುಲ್ ಖುರ್‌ಆನ್, ಸಿಲ್‌ಸಿಲಾ ಪಾರಾಯಣವೂ ಜರಗಿತು.

ಕಾರ್ಯಕ್ರಮದಲ್ಲಿ ಮಸೀದಿಯ ಖತೀಬ್ ಅಲ್‌ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ, ಮಸೀದಿ ಆಡಳಿತ ಸಮಿತಿಯ ಉಪಾಧ್ಯಕ್ಷ ಕೆ.ಅಶ್ರಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಕೋಶಾಧಿಕಾರಿ ಹಾಜಿ ಸೈಯದ್ ಅಹ್ಮದ್ ಬಾಷಾ ತಂಳ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಹಾಜಿ ಎಸ್‌ಎಂ ರಶೀದ್, ಅಬ್ದುಲ್ ಸಮದ್ ಹಾಜಿ, ಐ. ಮೊಯ್ದಿನಬ್ಬ ಹಾಜಿ, ಅದ್ದು ಹಾಜಿ, ಅಶ್ರಫ್ ಹಳೆಮನೆ, ಬದ್ರಿಯಾ ಜುಮಾ ಮಸೀದಿಯ ಖತೀಬ್ ಶೇಖಬ್ಬ ಬಾಖವಿ, ನಡುಪಳ್ಳಿ ಜುಮಾ ಮಸೀದಿಯ ಖತೀಬ್ ರಿಯಾಝ್ ಫೈಝಿ, ಮೊಯ್ದೀನ್ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಬಾಖವಿ, ಅಝ್ಹರಿಯ್ಯ ಮುದರ್ರಿಸ್ ಹೈದರ್ ಮದನಿ, ಸಹಾಯಕ ಮುದರ್ರಿಸ್ ಅಬೂಬಕ್ಕರ್ ಮದನಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News