ಗುಣಮಟ್ಟ, ಜ್ಞಾನ ಆಧಾರಿತ ಶಿಕ್ಷಣ ಇಂದಿನ ಅವಶ್ಯಕತೆ: ಡಾ.ಆಶ್ವತ್ಥ ನಾರಾಯಣ

Update: 2022-06-29 16:22 GMT

ಪುತ್ತೂರು: ಗುಣಮಟ್ಟ ಹಾಗೂ ಜ್ಞಾನ ಆಧಾರಿತ ಶಿಕ್ಷಣ ಇಂದಿನ ಅವಶ್ಯಕತೆ. ಈ ನಿಟ್ಟಿನಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಕಲಿಯುವುದು ಉತ್ತಮ. ಆ ಮೂಲಕ ಹೇರಳ ಉದ್ಯೋಗವಕಾಶಗಳನ್ನು ಪಡೆಯಬಹುದು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಸಿ. ಎಸ್. ಹೇಳಿದರು.

ಅವರು ಬುಧವಾರ ಸಂಜೆ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿಸ್ತರಿತ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಯುವ  ಸಮುದಾಯಕ್ಕೆ ಶೇ. ನೂರರಷ್ಟು ಉದ್ಯೋಗ, ಅದರಲ್ಲೂ ಕನಸಿನ ಉದ್ಯೋಗ ಸಿಗಬೇಕು ಎನ್ನುವುದು ಸರಕಾರದ ಉದ್ದೇಶ ಎಂದು ಹೇಳಿದ  ಸಚಿವರು, ಬದ್ಧತೆ ಇದ್ದರೆ ದೇಶವನ್ನು ಬದಲಾಯಿಸಬಹುದು. ಆ ಬದ್ಧತೆ ಸರಕಾರಕ್ಕಿದೆ ಎಂದರು.

ದೇಶದಲ್ಲಿ ಉನ್ನತ ಶಿಕ್ಷಣದಲ್ಲಿ ಸಂಪೂರ್ಣ ತಂತ್ರಜ್ಞಾನ ಜೋಡಿಸಿರುವ ಹೆಗ್ಗಳಿಕೆಯನ್ನು ಕರ್ನಾಟಕ ಉನ್ನತ ಶಿಕ್ಷಣ ಇಲಾಖೆ ಪಡೆದಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳನ್ನು ಇಂದು ಕಾಣಬಹುದಾಗಿದೆ ಎಂದ ಅವರು ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ನಿಂದ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ 4000 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.11 ಲಕ್ಷ ವಿದ್ಯಾರ್ಥಿಗಳು ಅದನ್ನು ಬಳಕೆ  ಮಾಡಿದ್ದಾರೆ. ಅದರಲ್ಲಿ ಟಾಪ್ 7 ಮಂದಿ ಸ. ಪ್ರ. ಕಾಲೇಜಿನ ವಿದ್ಯಾರ್ಥಿಗಳು ಎಂದುದು ಹೆಮ್ಮೆಯ ವಿಚಾರವಾಗಿ ಎಂದರು.

ಅಧ್ಯಕ್ಷತೆ ವಹಿಸಿದ ಪುತ್ತೂರು ಶಾಸಕ ಸಂಜೀವ ಮತಾಂದೂರು ಮಾತನಾಡಿ, ಇಂದು ಶಿಕ್ಷಣ ಕ್ಷೇತ್ರದಲ್ಲಿ ಅಮುಲಾಗ್ರ ಬದಲಾವಣೆ ಆಗುತ್ತಿದೆ. ರಾಷ್ಟ್ರಿಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಅನುಷ್ಠಾನ ಮಾಡುವಲ್ಲಿ ಅಶ್ವಥ್ ನಾರಾಯಣ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಗ್ರಾಮೀಣ  ಮಕ್ಕಳಿಗೆ ತಂತ್ರಜ್ಞಾನ ಆಧಾರಿತ ಶಿಕ್ಷಣ ಒದಗಿಸುತ್ತಿದ್ದಾರೆ ಎಂದರು.

ವೇದಿಕೆಯಲ್ಲಿ ಶಿಕ್ಷಣ ಇಲಾಖೆ ಮಂಗಳೂರು ಪ್ರಾದೇಶಿಕ ಕಚೇರಿ ಜಂಟಿ ನಿರ್ದೇಶಕಿ ಡಾ. ಜೆನ್ನಿಫರ್ ಲೋಲಿಟ ಸಿ., ಪುತ್ತೂರು ತಹಶೀಲ್ದಾರ್ ನಿಸರ್ಗಪ್ರಿಯ, ಕಾಲೇಜು ಅಭಿವೃದ್ಧಿ ಸಮಿತಿಯ ರಂಗನಾಥ ರೈ, ಬೆಟ್ಟಂಪಾಡಿ ಗ್ರಾ. ಪಂಚಾಯತ್ ಅಧ್ಯಕ್ಷೆ ಪವಿತ್ರ ಡಿ., ನಿಡಪಳ್ಳಿ ಪಂಚಾಯತ್ ಅಧ್ಯಕ್ಷೆ ಗೀತಾ ಉಪಸ್ಥಿತರಿದ್ದರು.

ಬೆಟ್ಟಂಪಾಡಿ ಸ. ಪ್ರ. ದ. ಕಾಲೇಜು ಪ್ರಮಶುಪಾಲ ಡಾ. ವಾರದರಾಜ್ ಚಂದ್ರಗಿರಿ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕ ನಿರೀಕ್ಷಣ್ ಸಿಂಗ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News