×
Ad

ಜು.1: ಸಿಟಿ ಗೋಲ್ಡ್ ವತಿಯಿಂದ ಬಹುಮಾನ ವಿತರಣೆ, ಸನ್ಮಾನ ಕಾರ್ಯಕ್ರಮ

Update: 2022-06-30 21:18 IST

ಮಂಗಳೂರು : ನಗರದ ಕಂಕನಾಡಿ ಬೈಪಾಸ್ ರಸ್ತೆಯ ಬಳಿಯಲ್ಲಿರುವ ಸಿಟಿ ಗೋಲ್ಡ್ ಸಂಸ್ಥೆಯ ವತಿಯಿಂದ ನಡೆದ ಪ್ರೈಡ್ ಬ್ರೈಡ್ ಡೈಮಂಡ್ ಫೆಸ್ಟಿವಲ್ ಪ್ರಯುಕ್ತ ಆರ್‌ಯು ದಿ ಡೈಮಂಡ್ ಸ್ಟಾರ್ ಎಂಬ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ಇಲ್ಹಾಮ್‌ಗೆ ಸನ್ಮಾನ ಕಾರ್ಯಕ್ರಮವು ಜು.1ರಂದು ಸಂಜೆ 5ಕ್ಕೆ ಸಿಟಿ ಗೋಲ್ಡ್ ಶೋರೂಮ್‌ನಲ್ಲಿ ನಡೆಯಲಿದೆ.

ಆರ್ ಯು ದಿ ಡೈಮಂಡ್ ಸ್ಟಾರ್ ಸ್ಪರ್ಧೆಯಲ್ಲಿ ವಿಜೇತರಾದ ಮೂಡುಬಿದಿರೆಯ ಲಾಮಿ ಮಿರಾಲ, ಮಂಗಳೂರಿನ ಆಯಿಝಾ ಫಾತಿಮಾ, ಕೃಷ್ಣಾಪುರದ ದುಆ ಅವರಿಗೆ ಬಹುಮಾನ ವಿತರಿಸಲಾಗುತ್ತದೆ.

ಮುಖ್ಯ ಅಥಿತಿಗಳಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಮುಲ್ಕಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್, ಜಂ ಇಯ್ಯತುಲ್ ಫಲಾಹ್ ಮಂಗಳೂರು ನಗರ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್, ಮಂಗಳೂರು ನಗರ ಟ್ರಾಫಿಕ್‌ ಎಸಿಪಿ ಗೀತಾ ಕುಲಕರ್ಣಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News