ಬೆಂಗಳೂರು ವಿಮಾನ ನಿಲ್ದಾಣ; 250 ಮಿಲಿಯನ್ ಪ್ರಯಾಣಿಕರ ಸಂಚಾರ ಮೀರಿದ ಸಾಧನೆ

Update: 2022-06-30 16:09 GMT

ಬೆಂಗಳೂರು, ಜೂ.30: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ ಅಥವಾ ಏರ್ ಪೋರ್ಟ್ ಓಪನಿಂಗ್ ಡೇ(ಎಒಡಿ)ಯಿಂದ ಜೂನ್ 2022ರವರೆಗೆ 250 ಮಿಲಿಯನ್ ಪ್ರಯಾಣಿಕರನ್ನು ಮೀರಿ ಗಮನಾರ್ಹ ಮೈಲಿಗಲ್ಲು ಸಾಧಿಸಿದೆ.

ಸಾಂಕ್ರಾಮಿಕ ಮತ್ತು ಅದರಿಂದ ನಿಧಾನಗತಿಯ ನಡುವೆಯೂ ಬೆಂಗಳೂರು ವಿಮಾನ ನಿಲ್ದಾಣದಿಂದ ಸುಮಾರು ಮೂರು ವರ್ಷಗಳ ಅವಧಿಯಲ್ಲಿ ಹೆಚ್ಚುವರಿ 50 ಮಿಲಿಯನ್ ಪ್ರಯಾಣಿಕರು ಸಂಚರಿಸಿದ್ದಾರೆ. ಅಲ್ಲದೆ, ಬೆಂಗಳೂರು ವಿಮಾನ ನಿಲ್ದಾಣವು ಎಒಡಿಯಿಂದ 2 ಮಿಲಿಯನ್ ಏರ್ ಟ್ರಾಫಿಕ್ ಮೂವ್‍ಮೆಂಟ್ಸ್(ಎಟಿಎಂಗಳು) ಕಂಡಿದ್ದು ದಕ್ಷಿಣ ಭಾರತದಲ್ಲಿ ಈ ಮೈಲಿಗಲ್ಲು ಸಾಧಿಸಿದ ಅತ್ಯಂತ ವೇಗದ ಸಾರ್ವಜನಿಕ-ಖಾಸಗಿ ಸಹಭಾಗಿತ್ವ(ಪಿಪಿಪಿ) ವಿಮಾನ ನಿಲ್ದಾಣವಾಗಿದೆ. 

ಹೊಸ ಕ್ಯಾರಿಯರ್‍ಗಳು ಹೊಸ ಮಾರ್ಗಗಳ ಪರಿಚಯ ಹಾಗೂ ಪ್ರಸ್ತುತದ ಮಾರ್ಗಗಳಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯು ಈ ಮಹತ್ತರ ಸಾಧನೆಯತ್ತ ಕೊಂಡೊಯ್ದಿದೆ. ಸಾಂಕ್ರಾಮಿಕವು ಕಳೆದ ಎರಡು ವರ್ಷಗಳಿಂದ ಟ್ರಾಫಿಕ್ ಪ್ರಗತಿಯನ್ನು ಸಾಮಾನ್ಯಕ್ಕಿಂತ ನಿಧಾನಗತಿ ತಂದಿದ್ದು ಬೆಂಗಳೂರು ವಿಮಾನ ನಿಲ್ದಾಣವು ಐತಿಹಾಸಿಕವಾಗಿ ವೇಗವಾಗಿ ಬೆಳೆದಿದ್ದು ಅದು ಇಷ್ಟು ತ್ವರಿತವಾಗಿ ಈ ಮೈಲಿಗಲ್ಲುಗಳನ್ನು ತಲುಪಿರುವುದೇ ಸಾಕ್ಷಿಯಾಗಿದೆ. 

ಎಒಡಿಯ ನಂತರಸಾಧಿಸಿದ ಮೈಲಿಗಲ್ಲುಗಳು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ(ಬಿಐಎಎಲ್)ದ ಎಂ.ಡಿ. ಮತ್ತು ಸಿಇಒ ಹರಿ ಮರಾರ್ ತಿಳಿಸಿರುವಂತೆ, 250 ಮಿಲಿಯನ್ ಮೈಲಿಗಲ್ಲು ತಲುಪಿರುವುದು ನಮಗೆ ಗ್ರಾಹಕ-ಕೇಂದ್ರಿತ ವಿಧಾನ, ಆವಿಷ್ಕಾರ ಮತ್ತು ತಾಂತ್ರಿಕವಾಗಿ ಸುಧಾರಿತ ಮೂಲಸೌಕರ್ಯವನ್ನು ಮರು ದೃಢೀಕರಿಸುತ್ತಿದೆ ಎಂದು ಹೇಳಿದ್ದಾರೆ.

ಇದು ಹೊಸ ಮಾರ್ಗಗಳ ಪರಿಚಯ ಹಾಗೂ ನಮ್ಮ ವೈಮಾನಿಕ ಪಾಲುದಾರರು ಹಾಗೂ ಇತರೆ ಪಾಲುದಾರರೊಂದಿಗೆ ಹತ್ತಿರದಿಂದ ಕೆಲಸ ಮಾಡುವ ಸಂಯೋಗವು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಥಿರವಾದ ಪ್ರಗತಿಗೆ ಕಾರಣವಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ನಾವು ಸಾಧಿಸಿದ ಈ ಮೈಲಿಗಲ್ಲು ನಮ್ಮ ಪ್ರಯಾಣಿಕರಿಗೆ ಅತ್ಯುತ್ತಮವಾದುದನ್ನು ಪರಿಚಯಿಸುವ ನಮ್ಮ ಬದ್ಧತೆಯ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಅಸಾಧಾರಣ ಪ್ರಯಾಣದ ಅನುಭವ ಸೃಷ್ಟಿಸುವಲ್ಲಿ ಬೆಂಗಳೂರು ವಿಮಾನ ನಿಲ್ದಾಣವು ವಿಶ್ವಮಟ್ಟದ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಒದಗಿಸುತ್ತಿದೆ. ಪ್ರಯಾಣಿಕರು ಹೊಸದಾಗಿ ಪ್ರಾರಂಭಿಸಲಾದ 080 ಲೌಂಜಸ್ ಅಂಡ್ ಟ್ರಾನ್ಸಿಟ್ ಹೊಟೇಲ್‍ನಲ್ಲಿ ಅವರ ನಿಲುಗಡೆಯಲ್ಲಿ ಅತ್ಯುತ್ತಮ ಆತಿಥ್ಯ ಅನುಭವಿಸಬಹುದು. ಅತ್ಯಾಧುನಿಕ ಟರ್ಮಿನಲ್-2 ಪ್ರಾರಂಭದೊಂದಿಗೆ ಬೆಂಗಳೂರು ವಿಮಾನ ನಿಲ್ದಾಣವು `ಭಾರತಕ್ಕೆ ಹೊಸ ಹೆಬ್ಬಾಗಿಲು’ ಆಗುವ ಗುರಿ ಹೊಂದಿದೆ ಎಂದು ಅವರು ಹೇಳಿದ್ದಾರೆ. 

ಪ್ರಯಾಣಿಕರು ಇತ್ತೀಚೆಗೆ 2022 ಸ್ಕೈಟ್ರಾಕ್ಸ್ ವಲ್ರ್ಡ್ ಏರ್ ಪೋರ್ಟ್ ಅವಾಡ್ರ್ಸ್‍ನಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ `ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ’ ಎಂದು ಮತದಾನ ಮಾಡಿದ್ದರು ಎಂದು ಹರಿಮರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News