ಖಾಲಿ ಸೈಟ್‍ನಲ್ಲಿ ಕಸ ಹಾಕಿದರೆ ದಂಡ: BBMP ಎಚ್ಚರಿಕೆ

Update: 2022-07-01 13:57 GMT
ಫೈಲ್ ಚಿತ್ರ

ಬೆಂಗಳೂರು, ಜು.1: ಕೋವಿಡ್ ಪೂರ್ವದಲ್ಲಿ ಬಿಬಿಎಂಪಿ ಪ್ಲಾಸ್ಟಿಕ್ ನಿಷೇಧ ಹಾಗೂ ಬ್ಲಾಕ್ ಸ್ಪಾಟ್‍ಗಳ ನಿರ್ವಹಣೆಯಲ್ಲಿ ಸಮರ್ಪಕ ಕೆಲಸವನ್ನು ನಿರ್ವಹಿಸಿದೆ. ಖಾಲಿ ಸೈಟ್‍ನಲ್ಲಿ ಕಸ ಹಾಕಿದ್ದರೆ ದಂಡ ಹಾಕಲಾಗುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಶರತ್ ಬಿ. ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಲಿ ನಿವೇಶನಗಳಲ್ಲಿ ಕಸವನ್ನು ಹಾಕಿ, ಬ್ಲಾಕ್ ಸ್ಪಾಟ್‍ಗಳಾಗಿ ಮಾಡಲಾಗುತ್ತಿದೆ. ಕೋವಿಡ್ ಪೂರ್ವದಲ್ಲಿ ಬಿಬಿಎಂಪಿ ಬ್ಲಾಕ್ ಸ್ಪಾಟ್‍ಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿತ್ತು. ಇದನ್ನು ಮುಂದುವರೆಸುವ ನಿಟ್ಟಿನಲ್ಲಿ ಖಾಲಿ ಸೈಟ್‍ಗಳಲ್ಲಿ ಕಸ ಇದ್ದರೆ ಒಂದು ಚದರ ಅಡಿಗೆ 2 ರೂ.ಗಳ ದಂಡವನ್ನು ಹಾಕಲಾಗುವುದು. ಈ ದಂಡವನ್ನು ಸೈಟ್ ಮಾಲಕರು ಪಾವತಿ ಮಾಡದಿದ್ದಲ್ಲಿ, ಆಸ್ತಿ ತೆರಿಗೆಯಲ್ಲಿ ವಸೂಲಿ ಮಾಡಲಾಗುವುದು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News