ಮಂಗಳೂರು : ಸಿಟಿ ಗೋಲ್ಡ್ ವತಿಯಿಂದ ಬಹುಮಾನ ವಿತರಣೆ, ಸನ್ಮಾನ ಕಾರ್ಯಕ್ರಮ

Update: 2022-07-01 15:59 GMT

ಮಂಗಳೂರು : ನಗರದ ಕಂಕನಾಡಿ ಬೈಪಾಸ್ ರಸ್ತೆಯ ಬಳಿಯಲ್ಲಿರುವ ಸಿಟಿ ಗೋಲ್ಡ್ ಸಂಸ್ಥೆಯು ‘ಪ್ರೈಡ್ ಬ್ರೈಡ್ ಡೈಮಂಡ್ ಫೆಸ್ಟಿವಲ್’ ಪ್ರಯುಕ್ತ ಆಯೋಜಿಸಿದ್ದ ‘ಆರ್‌ಯು ದಿ ಡೈಮಂಡ್ ಸ್ಟಾರ್’ ಎಂಬ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ಇಲ್ಹಾಮ್‌ ರನ್ನು ಸನ್ಮಾನಿಸುವ ಕಾರ್ಯಕ್ರಮವು ಶುಕ್ರವಾರ ಸಿಟಿ ಗೋಲ್ಡ್ ಶೋರೂಮ್‌ನಲ್ಲಿ ನಡೆಯಿತು.

ಆರ್ ಯು ದಿ ಡೈಮಂಡ್ ಸ್ಟಾರ್ ಸ್ಪರ್ಧೆಯಲ್ಲಿ ವಿಜೇತರಾದ ಮೂಡುಬಿದಿರೆಯ ಲಾಮಿ ಮಿರಾಲ, ಮಂಗಳೂರಿನ ಆಯಿಝಾ ಫಾತಿಮಾ, ಕೃಷ್ಣಾಪುರದ ದುಆ ಬಹುಮಾನ ಪಡೆದುಕೊಂಡರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್, ಜಂ ಇಯ್ಯತುಲ್ ಫಲಾಹ್ ಮಂಗಳೂರು ನಗರ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಶುಭ ಹಾರೈಸಿದರು.

ಸಿಟಿ ಗೋಲ್ಡ್ ಮಂಗಳೂರು ಬ್ರಾಂಚ್‌ನ ಮ್ಯಾನೇಜರ್ ಅಹ್ಮದ್ ಹಫೀಝ್ ಮತ್ತು ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ. ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News