ಇಂದಿನಿಂದ ವಕ್ಫ್ ಬೋರ್ಡ್ ಅಧ್ಯಕ್ಷರ ವಿದೇಶ ಪ್ರವಾಸ

Update: 2022-07-01 18:25 GMT

ಬೆಂಗಳೂರು, ಜು.1: ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಅವರು ಜು.2, 3 ಹಾಗೂ 4ರಂದು ದುಬೈ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಅಬುಧಾಬಿ, ಶಾರ್ಜಾ ಸೇರಿದಂತೆ ವಿವಿಧ ಎಮಿರೆಟ್ಸ್‍ಗಳಲ್ಲಿನ ಅಭಿನಂದನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಎಲೈಟ್ ಅಲಯನ್ಸ್, ಎಚ್‍ಎಂಸಿ ಯುನೈಟೆಡ್ ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿ-2022 ಪ್ರದಾನ ಸಮಾರಂಭದಲ್ಲಿಯೂ ಶಾಫಿ ಸಅದಿ ಭಾಗವಹಿಸಲಿದ್ದಾರೆ. ಅಲ್ಲದೆ, ರಾಜ್ಯದ ವಿವಿಧ ಸಂಘಟನೆಗಳೊಂದಿನ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News