ಕೋರ್ಟ್‌ ಆದೇಶ ನೀಡುವ ಮುಂಚೆಯೇ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ: ಝುಬೈರ್‌ ಪರ ವಕೀಲ ಆರೋಪ

Update: 2022-07-02 10:39 GMT

ಹೊಸದಿಲ್ಲಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಸತ್ಯಶೋಧಕ ಹಾಗೂ ಪತ್ರಕರ್ತ ಮುಹಮ್ಮದ್‌ ಝುಬೈರ್‌ರನ್ನು ಬಂಧಿಸಿದ ಬಳಿಕ ಅವರ ಮೇಳೆ ಇನ್ನಿತರ ಆರೋಪಗಳನ್ನು ದಿಲ್ಲಿ ಪೊಲೀಸರು ಹೊರಿಸಿದ್ದರು. ಇದೀಗ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ ಎಂಬ ಸುದ್ದಿಯನ್ನು ರಾಷ್ಟ್ರೀಯ ಮಾಧ್ಯಮಗಳು ಪ್ರಕಟಿಸಿರುವ ಕುರಿತು ಝುಬೈರ್‌ ಪರ ವಕೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

"ನ್ಯಾಯಾಲಯವು 4 ಗಂಟೆಗೆ ಈ ಕುರಿತು ತೀರ್ಪು ಪ್ರಕಟಿಸಲಿದೆ. ನ್ಯಾಯಾಲಯವು ತೀರ್ಪು ಪ್ರಕಟಿಸುವ ಮುಂಚೆಯೇ ಇದನ್ನು ಮಾಧ್ಯಮಗಳು ಪ್ರಟಿಸಿರುವುದು ಅಕ್ಷಮ್ಯವಾಗಿದೆ. ಪೊಲೀಸರು ಇದನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ" ಎಂದು ಝುಬೈರ್‌ ಪರ ವಕೀಲ ಸೌತಿಕ್‌ ಬ್ಯಾನರ್ಜಿ ಹೇಳಿಕೆ ನೀಡಿದ್ದಾರೆ. ಇದುವರೆಗೂ ನ್ಯಾಯಾಲಯವು ತೀರ್ಪು ಪ್ರಕಟಿಸಿಲ್ಲ, ಆದರೆ ಈಗಾಗಲೇ ಪ್ರಮುಖವಾಗಿ ANI ಸೇರಿದಂತೆ ಹಲವು ರಾಷ್ಟ್ರೀಯ ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News