ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣದ ಮೊದಲ ಆರೋಪಿ ಸೆರೆ

Update: 2022-07-03 12:35 GMT

ಬೆಂಗಳೂರು, ಜು. 3: ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಪಿಎಸ್ಸೈ) ನೇಮಕಾತಿ ಅಕ್ರಮ ಸಂಬಂಧ ಪ್ರಕರಣದ ಮೊದಲನೆಯ ಆರೋಪಿ ಜಾಗೃತ ಎಂಬಾತನನ್ನು ಸಿಐಡಿ ಬಂಧಿಸಿದೆ.

ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‍ಐಆರ್ ನ ಮೊದಲ ಹೆಸರಿನ ಆರೋಪಿ ಜಾಗೃತ್‍ನನ್ನು ಚನ್ನಪಟ್ಟಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಆರೋಪಿ ಜಾಗೃತ್ ಪರೀಕ್ಷೆ ರದ್ದಾದ ಬಳಿಕ ನಡೆದ ಪ್ರತಿಭಟನೆಯ ಮುಂದಾಳತ್ವವನ್ನೂ ವಹಿಸಿದ್ದ. ಅಲ್ಲದೆ, ಹಗರಣ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ ಎಂದು ಹೇಳಲಾಗುತ್ತಿದೆ.

ಇನ್ನೂ, ಮೊದಲ ಹಂತದಲ್ಲೇ ಹಣ ಕೊಟ್ಟು ಒಎಂಆರ್ ಶೀಟ್ ತಿದ್ದಿಸಿರುವುದು ಗೊತ್ತಾಗಿತ್ತು. ಎಫ್‍ಎಸ್‍ಎಲ್ ವರದಿಯನ್ವಯ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದ. ಇದಾದ ನಂತರ ತಲೆಮರೆಸಿಕೊಂಡು ಹೈಕೋರ್ಟ್‍ನಲ್ಲಿ ಎಫ್‍ಐಆರ್ ವಜಾಕ್ಕೆ ಅರ್ಜಿ ಸಲ್ಲಿಸಿದ್ದನು. 

ಆರೋಪಿ ಎಫ್‍ಡಿಎ ಹರ್ಷ ಮೂಲಕ ವ್ಯವಹಾರ ಮಾಡಿರುವ ಗಂಭೀರ ಆರೋಪ ಈತ ಮೇಳಿದ್ದು, ಸಿಐಡಿ ಪೊಲೀಸರು ಆರೋಪಿಯನ್ನು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News