VIDEO- ಷಡ್ಯಂತ್ರ ವಿಫಲಗೊಳಿಸಲು ಕಾರ್ಮಿಕರು ಒಗ್ಗೂಡಬೇಕು: ಜ್ಯೋತಿ ಎ.

Update: 2022-07-03 18:30 GMT

ಬೆಂಗಳೂರು, ಜು. 3: ಕಾರ್ಮಿಕರಿಗೆ ಕಷ್ಟವನ್ನು ನೀಡಲೆಂದೇ ಮಾಲಕರು ಮತ್ತು ಸರಕಾರ ಒಂದಾಗುತ್ತದೆ. ಕಾರ್ಮಿಕರ ವಿರುದ್ಧ ಅವರು ನಡೆಸುವ ಷಡ್ಯಂತ್ರವನ್ನು ವಿಫಲಗೊಳಿಸಲು ಕಾರ್ಮಿಕರೆಲ್ಲರೂ ಸಂಘಟಿತರು  ಆಗಲೇಬೇಕು' ಎಂದು ಭಾರತೀಯ ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆ ಜ್ಯೋತಿ ಎ. ಕರೆ ನೀಡಿದ್ದಾರೆ. 

ರವಿವಾರ ಇಲ್ಲಿನ ಎಸ್‍ಸಿಎಂ ಹೌಸ್‍ನಲ್ಲಿ ಎಎಲ್‍ಎಫ್ ಹಾಗೂ ಜಿಎಟಿಡಬ್ಲ್ಯೂಯು ವತಿಯಿಂದ ಆಯೋಜಿಸದ್ದ ‘ಗಾರ್ಮೆಂಟ್ಸ್ ಕಾರ್ಮಿಕರ ಬಗ್ಗೆ ಸರಕಾರ ತೋರುತ್ತಿರುವ ನಿರ್ಲಕ್ಷ್ಯ’ ಎಂಬ ಸಂವಾದದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಶಿಕ್ಷಣ, ಆರೋಗ್ಯ ಸೇರಿ ಎಲ್ಲವೂ ಖಾಸಗಿಕರಣವಾಗುತ್ತಿರುವಾಗ ಕನಿಷ್ಟ ವೇತನ 30 ಸಾವಿರ ರೂ.ಗಳು ಬಂದರೂ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಆಳುವ ಸರಕಾರದ ಅವೈಜ್ಞಾನಿಕ ನೀತಿಗಳಿಂದ ದಿನಬಳಕೆಯ ವಸ್ತುಗಳ ಬೆಲೆಯು ಹೆಚ್ಚಾಗಿದೆ. ಹಾಗಾಗಿ ಕಾರ್ಮಿಕರು ತಮ್ಮ ಹೋರಾಟದ ಇತಿಹಾಸವನ್ನು ತಿರುಗಿ ನೋಡಬೇಕಾಗಿದೆ' ಎಂದು ಸಲಹೆ ನೀಡಿದರು. 

‘ಕಾರ್ಮಿಕರ ನಿರಂತ ಹೋರಾಟದ ಫಲವಾಗಿ ಲಭಿಸಿದ್ದ ಕಾರ್ಮಿಕ ಕಾನೂನು ಹಾಗೂ ಕಾಯ್ದೆಗಳನ್ನು ಕೇಂದ್ರ ಬಿಜೆಪಿ ಸರಕಾರವು ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ರೂಪಿಸಿದೆ. ಇವು ಕಾರ್ಮಿಕರಿಗೆ ಮಾರಕವಾಗಿದ್ದು, ಮಾಲೀಕರ ಹಾಗೂ ಸರಕಾರದ ಪರವಾಗಿವೆ. ಈಗಾಗಲೇ ಜು.1ರಿಂದ ಕಾರ್ಮಿಕ ಸಂಹಿತೆಗಳು ದೇಶದಲ್ಲಿ ಜಾರಿಯಾಗಿವೆ' ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಯಾವ ಉದ್ದಿಮೆಗಳಲ್ಲಿ ಹೆಣ್ಣು ಮಕ್ಕಳು ಹೆಚ್ಚು ಕೆಲಸವನ್ನು ಮಾಡುತ್ತಿದ್ದಾರೋ ಅಲ್ಲಿ ಕಡಿಮೆ ಸಂಬಳ ಇದೆ. ಬಿಸಿಯೂಟ ನೌಕರರಿಗೆ ಕೇವಲಮ 3 ಸಾವಿರ ರೂ.ಸಂಬಳ ಇದೆ. ಗಾರ್ಮೆಂಟ್ಸ್‍ನಲ್ಲಿ ಕಡಿಮೆ ಸಂಬಳ ಇದೆ. ಇಲ್ಲಿ ಮರೆ ಮಾಚಲಾದ ಲಿಂU Àರಾಜಕಾರಣ ಇದೆ' ಎಂದು ಅವರು ಇದೇ ವೇಳೆ ಎಚ್ಚರಿಕೆ ನೀಡಿದರು. 

ಸರಕಾರ ಮತ್ತು ಮಾಲಕರು ಒಂದಾಗಿರುವ ಕಾರಣ, ಉದ್ದಿಮೆಗಳಲ್ಲಿ ಕಾರ್ಮಿಕರ ಯೂನಿಯನ್‍ಗೆ ಅವಕಾಶ ನೀಡುತ್ತಿಲ್ಲ. ಹಾಗಾಗಿ ಉದ್ದಿಮೆಗಳಲ್ಲಿ ಕಾರ್ಮಿಕರು ಯೂನಿಯನ್ ರಚಿಸಲು ಆಡಳಿತ ಮಂಡಳಿಗಳು ಒಪ್ಪುವುದಿಲ್ಲ. ಇದರಿಂದ ಕಾರ್ಮಿಕರು ಅತಂತ್ರರಾಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಜಯನಗರ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ, ಶಾಸಕರು ಸಂಬಳವನ್ನು ಹೆಚ್ಚಿಸಿಕೊಂಡಿದ್ದಾರೆ. ಇದು ಬೇಕಾಗಿರಲಿಲ್ಲ. ಬದಲಾಗಿ ಕಾರ್ಮಿಕರ ಸಂಬಳವನ್ನು ಹೆಚ್ಚಿಸಬೇಕಾಗಿತ್ತು. ಕೊರೋನ ಸೋಂಕು ಹೆಚ್ಚಿದ್ದ ಕಾಲಘಟ್ಟದಲ್ಲಿ ಸರಕಾರ ಆಸ್ವತ್ರೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಅದು ಈಗಲೂ ಮುಂದುವರೆದಿದೆ. ಗರ್ಭವತಿಗೆ ಚಿಕಿತ್ಸೆ ನೀಡಲು ಸರಕಾರಿ ವೈದ್ಯರೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟು, ಲಂಚ ಕೊಡುವವರೆಗೂ ಚಿಕಿತ್ಸೆ ನೀಡದಂತಹ ವಾತಾವರಣ ಇಂದು ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. 

ಜಿಎಟಿಡಬ್ಲ್ಯೂಯುನ ಅಧ್ಯಕ್ಷೆ ಪ್ರತಿಭಾ ಆರ್. ಮಾತನಾಡಿ, ಗಾಮೆಂಟ್ಸ್‍ಗಳಲ್ಲಿ ಮಹಿಳೆಯರಿಗೆ ಕೇವಲ 10 ಸಾವಿರ ಕನಿಷ್ಟ ವೇತನವನ್ನು ನೀಡುತ್ತಿದ್ದಾರೆ. ಬೆಲೆಯೇರಿಕೆ ಆಗುತ್ತಿರುವ ಕಾಲಘಟ್ಟದಲ್ಲಿ ವೇತನವನ್ನು ಪರಿಷ್ಕರಿಸಿ, 30 ಸಾವಿರ ರೂ.ಗಳಿಗೆ ವೇತನ ಹೆಚ್ಚಿಸಬೇಕು. ಬೆಂಗಳೂರು ನಗರ ಹೊರತುಪಡಿಸಿ ಹಳ್ಳಿಗಳಲ್ಲಿ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ಹಾಗಾಗಿ ಸುಮಾರ 65 ಕಿ.ಮೀಗಳಿಂದ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿರುವವರು ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಸಾರಿ ವ್ಯವಸ್ಥೆ ಕಲ್ಪಿಸಬೇಕು ಎಂದು ಹಕ್ಕೋತ್ತಾಯ ಮಂಡಿಸಿದರು. 

ಇನ್ನು ಗಾರ್ಮೆಂಟ್ಸ್‍ಗಳಲ್ಲಿ ಲೈಂಗಿಕ ಕಿರುಕುಳ ಹೆಚ್ಚಾಗಿದೆ. ಉದ್ಯೋಗ ಅಭದ್ರತೆ ಇರುವ ಕಾರಣ ಮೇಲಾಧಿಕಾರಿಗಳು ಮಹಿಳಾ ಕಾರ್ಮಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಇದಕ್ಕೆ ಸರಕಾರವು ಶಾಶ್ವತ ಪರಿಹಾರವನ್ನು ನೀಡಬೇಕು ಎಂದು ಹೇಳಿದರು. 

‘ಇಎಸ್‍ಐ ಆಸ್ಪತ್ರೆಗಳಲ್ಲಿ ಉತ್ತಮ ವೈಧ್ಯಕೀಯ ಸೌಲಭ್ಯವಿದೆ. ಒಳ್ಳೆಯ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಕಾರ್ಮಿಕರಿಗೆ ಅಲ್ಲಿ ಸೇವೆಯನ್ನು ಪಡೆಯಲು ಯಾವ ದಾಖಲೆಗಳನ್ನು ನೀಡಬೇಕು ಎಂದು ತಿಳುವಳಿಕೆ ಇಲ್ಲ. ಹಾಗಾಗಿ ಚಿಕಿತ್ಸೆ ಲಭಿಸುವುದು ವಿಳಂಭವಾಗುತ್ತಿದೆ, ಆಡಳಿತ ಮಂಡಳಿಗಳು ಇದರ ಬಗ್ಗೆ ಯೋಚಿಸುವುದಿಲ್ಲ. ಇದರಿಂದ ಕಾರ್ಮಿಕರು ತಮ್ಮ ವೈಧ್ಯಕೀಯ ಸೌಲಭ್ಯದಿಂದ ದೂರವಾಗಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ'

-ರಾಜೇಶ್, ಗಾಮೆಂಟ್ಸ್ ಕಾರ್ಮಿಕ

-------------

‘ಸರಕಾರವನ್ನು ನಾವು ಆರಿಸಿ ಕಳುಹಿಸುತ್ತಿದ್ದೇವೆ. ನಮ್ಮ ಬಗ್ಗೆ ಯೋಚಿಸುವವರನ್ನು ಆಯ್ಕೆ ಮಾಡಿ ಕಳುಹಿಸುವುದು ಅನಿವಾರ್ಯ. ಹಾಗಾಗಿ ನಮಗೆ ಅನ್ನ ಹಾಕದ ಹಿಂದುತ್ವವನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು? ಮಾಜಿ ಸಿಎಂ ಸಿದ್ದರಾಮಯ್ಯ ಅಕ್ಕಿಯನ್ನು ನೀಡಿದಾಗ, ಜನರು ಸೋಮಾರಿಗಳಾಗುತ್ತಾರೆಂದು ಹೇಳಿದ್ದವರು, ಕೊರೋನಾ ಸಂದರ್ಭದಲ್ಲಿ ಅದರ ಬೆಲೆಯನ್ನು ತಿಳಿದುಕೊಂಡಿದ್ದಾರೆ' 

-ಜ್ಯೋತಿ ಎ., ಭಾರತೀಯ ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News