ನವಮಂಗಳೂರು ಬಂದರಿಗೆ ಬೃಹತ್ ಗಾತ್ರದ ಸರಕು ಹಡಗು ಆಗಮನ

Update: 2022-07-03 16:30 GMT

ಮಂಗಳೂರು, ಜು.3: ನವಮಂಗಳೂರು ಬಂದರಿಗೆ  ಭಾರಿ ಗಾತ್ರದ ಸರಕು ಸಾಗಾಟದ ಹಡಗು  ಆಗಮಿಸಿದ್ದು ಅದನ್ನು ನೀರು ಹಾಯಿಸುವ ಮೂಲಕ ಸ್ವಾಗತಿಸಲಾಯಿತು.

‘ಎಂ.ಎಸ್.ಸಿ ಎರ್ಮಿನಿಯಾ’ ಹೆಸರಿನ ಹಡಗು ಇದಾಗಿದ್ದು ಕೊಲಂಬಿಯಾದಿಂದ 1265 ಆಮದು ಸರಕು ಪೆಟ್ಟಿಗೆಗಳನ್ನು ಹೊತ್ತು ಮಂಗಳೂರು ‌ಬಂದರಿಗೆ ರವಿವಾರ  ತಲುಪಿದೆ.

ಹಡಗಿನಿಂದ ಸರಕನ್ನು ಇಳಿಸು ಕಾರ್ಯಕ್ಕೆ ನವ ಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ.ವೆಂಕಟರಮಣ ಅಕ್ಕರಾಜು ಅವರು ಚಾಲನೆ ನೀಡಿದರು. ಬಂದರಿನ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಜೆಎಸ್‌ಡಬ್ಲ್ಯುಅಧಿಕಾರಿಗಳು ಉಪಸ್ಥಿತರಿದ್ದರು.

ಈ ಹಡಗು 276.5 ಮೀ.ಉದ್ದ ಹಾಗೂ  32.2 ಮೀ. ಅಗಲದ್ದಾಗಿದೆ. ಕ್ಯಾ.ಆರ್‌.ಡಿ.ಪಾಯಸ್‌ ಹಾಗೂ ಕ್ಯಾ.ರಜನಿಕಾಂತ್‌ ಈ ಹಡಗಿನ ಪೈಲಟ್‌ಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News