ಬೆಸ್ಕಾಂ ‘ಇ.ವಿ ಎಕ್ಸ್‌ಪೋ’; ಹರಿದು ಬಂದ ಜನಸಾಗರ

Update: 2022-07-03 17:35 GMT

ಬೆಂಗಳೂರು, ಜು. 3: ‘ನಗರದ ಅರಮನೆ ಮೈದಾನದಲ್ಲಿ ಬೆಸ್ಕಾಂವತಿಯಿಂದ ಏರ್ಪಡಿಸಿದ್ದಮೂರು ದಿನಗಳ ‘ಇ.ವಿ. ಎಕ್ಸ್ಫೊ'ಗೆ ರವಿವಾರ ತೆರೆಬಿದ್ದಿದ್ದು, ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಇವಿ ಎಕ್ಸ್ಫೊ ವೀಕ್ಷಿಸಿದರು.

ಸಾರ್ವಜನಿಕರಿಗೆ ಇವಿ ಕುರಿತು ಇನ್ನಷ್ಟು ಅರಿವು ಮೂಡಿಸಲು ಇಂಧನ ಸಚಿವ ವಿ.ಸುನಿಲ್ ಕುಮಾರ್ ಸೂಚಿಸಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ಈ ಅಭಿಯಾನವನ್ನು ಮುಂದುವರಿಸಲು ನಿರ್ಧರಿಸಿದ್ದು, ಇವಿ ಎಕ್ಸ್ಫೊ ಮೇಳವನ್ನು ಮುಂದಿನ ದಿನಗಳಲ್ಲಿ ರಾಜ್ಯದ ವಿಭಾಗ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ ಎಂದು ತಿಳಿಸಲಾಗಿದೆ.

‘ಇ.ವಿ.ಎಕ್ಸ್ಫೊವನ್ನು ಮೈಸೂರು, ಮಂಗಳೂರು, ಹಬ್ಬಳ್ಳಿ, ಬೆಳಗಾವಿ ಮತ್ತು ಕಲಬುರಗಿಯಲ್ಲಿ ನಡೆಸಲು ಬೆಸ್ಕಾಂ ನಿರ್ಧರಿಸಿದೆ' ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಪಿ.ರಾಜೇಂದ್ರ ಚೋಳನ್ ತಿಳಿಸಿದರು. ಇವಿ ಎಕ್ಸ್ಫೊವನ್ನು ವಿಭಾಗೀಯ ಮಟ್ಟದಲ್ಲಿ ನಡೆಸಲು ಸಚಿವರು ಸೂಚಿಸಿರುವ ಹಿನ್ನೆಲೆಯಲ್ಲಿ, ಇವಿ ನೋಡಲ್ ಏಜೆನ್ಸಿಯಾಗಿರುವ ಬೆಸ್ಕಾಂ ಎರಡನೆ ಹಂತದ ನಗರಗಳಲ್ಲಿ ಎಕ್ಸ್ಫೊ ನಡೆಸಲಿದೆ. 

ಅತ್ಯಂತ ಕಡಿಮೆ ಅವಧಿಯಲ್ಲಿ ಯೋಜನೆ ಮಾಡಿ ಮೊಟ್ಟ ಮೊದಲ ಇವಿ ಎಕ್ಸ್ಫೊವನ್ನು ಬೆಸ್ಕಾಂ ಆಯೋಜಿಸಿತ್ತು. ಎಕ್ಸ್ಫೊಗೆ ಅಭೂತ ಪೂರ್ವ ಯಶಸ್ವು ದೊರೆತಿದ್ದು, ಮುಂದಿನ ದಿನಗಳಲ್ಲಿ ನಿರಂತರವಾಗಿ ಇವಿ ಎಕ್ಸ್ಫೊವನ್ನು ಬೆಸ್ಕಾಂ ಆಯೋಜಿಸಲಿದೆ ಎಂದು ಅವರು ಮಾಹಿತಿ ನೀಡಿದರು. 

1ಸಾವಿರ ಮೀಟರ್‍ಗೆ ಒಂದು ಚಾಜಿರ್ಂಗ್ ಸ್ಟೇಷನ್: 2025ರ ವೇಳೆಗೆ 5 ಲಕ್ಷಕ್ಕೂ ಹೆಚ್ಚು ಇವಿ ವಾಹನಗಳು ರಸ್ತೆಗೆ ಬರಲಿದೆ, ಹೀಗಾಗಿ ಹೆಚ್ಚು ಇವಿ ಚಾಜಿರ್ಂಗ್ ಸ್ಟೇಷನ್‍ಗಳ ಅಗತ್ಯ ಇದೆ. ಪ್ರತಿ 500 ರಿಂದ 1ಸಾವಿರ ಮೀಟರ್‍ಗೆ ಒಂದರಂತೆ ಚಾಜಿರ್ಂಗ್ ಸ್ಟೇಷನ್ ನಿರ್ಮಿಸಲು ಬೆಸ್ಕಾಂ ನಿರ್ಧರಿಸಿದ್ದು, ಮುಂದಿನ 2 ತಿಂಗಳಲ್ಲಿ 1ಸಾವಿರ ಸಾವಿರ ಚಾಜಿರ್ಂಗ್ ಸ್ಟೇಷನ್‍ಗಳ ನಿರ್ಮಾಣ ಗುರಿ ನಿಗದಿಪಡಿಸಿದೆ. 

ಬೆಸ್ಕಾಂನ 389 ಚಾಜಿರ್ಂಗ್ ಸ್ಟೇಷನ್ ಈಗಾಗಲೇ ಕಾರ್ಯರಂಭ ಮಾಡುತ್ತಿದ್ದು, ಚಾಜಿರ್ಂಗ್ ಸ್ಟೇಷನ್ ಗಳ ನಿರ್ಮಾಣಕ್ಕೆ ಬೆಸ್ಕಾಂನ ಏಕ ಗವಾಕ್ಷಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದರೆ, 7 ದಿನಗಳಲ್ಲಿ ಚಾಜಿರ್ಂಗ್ ಸ್ಟೇಷನ್ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು. ಖಾಸಗಿ ವ್ಯಕ್ತಿಗಳು, ಕಂಪೆನಿಗಳು ಚಾಜಿರ್ಂಗ್ ಸ್ಟೇಷನ್ ನಿರ್ಮಾಣ ಮಾಡಲು ಆಸಕ್ತಿ ಇದ್ದರೆ, 25 ಕಿ.ವ್ಯಾಟ್ ಸಾಮಥ್ರ್ಯದ ಚಾಜಿರ್ಂಗ್ ಸ್ಟೇಷನ್ ನಿರ್ಮಿಸಲು ಬೆಸ್ಕಾಂ ಅನುಮತಿ ನೀಡಲಿದೆ. 

ವಸತಿ ಸಮುಚ್ಚಯ, ವಸತಿ ಬಡಾವಣೆಗಳಲ್ಲಿ ಚಾಜಿರ್ಂಗ್ ಸ್ಟೇಷನ್ ನಿರ್ಮಾಣಕ್ಕೆ ಬೆಂಗಳೂರು ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಜತೆ ಬೆಸ್ಕಾಂ ಮಾತುಕತೆ ನಡೆಸುತ್ತಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಯೋಜನೆ ಮಾಡಿದ್ದ ಬೆಸ್ಕಾಂನ ಇವಿ ಎಕ್ಸ್ಫೊಗೆ ಭಾರೀ ಯಶಸ್ವು ದೊರೆತಿದೆ. ರವಿವಾರ ಎಕ್ಸ್ಫೊ ವೀಕ್ಷಿಸಲು ಜನರ ನೂಕು-ನುಗ್ಗಲು ಏರ್ಪಟ್ಟಿತ್ತು. 

ಇಲೆಕ್ಟ್ರಿಕ್ ಸ್ಕೂಟರ್, ಬೈಕ್, ಇವಿ ಸೈಕಲ್ ಹಾಗು ಟ್ರಾಕ್ಟರ್‍ಗಳ ಟೆಸ್ಟ್ ರೈಡ್  ಮಾಡಿ ಜನರು ಆನಂದಿಸಿದರು. ಕಾರು ಚಾಜಿರ್ಂಗ್ ಉಪಕರಣ ಮತ್ತು ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಉತ್ಪಾದನೆ ಮಾಡುತ್ತಿರುವ ದಿಲ್ಲಿ ಮೂಲದ ಐಎಂಎಎಫ್‍ಎಲ್ ಮತ್ತು ಎಸ್‍ವಿಟಿ ಮೊಬಿಲಿಟಿಗೆ ಮೂರು ದಿನಗಳಲ್ಲಿ 1ಕೋಟಿ ರೂ.ಗಳಿಗೂ ಹೆಚ್ಚು ವಹಿವಾಟು ಆಗಿದೆ ಎಂದು ಅದರ ಮುಖ್ಯಸ್ಥ ಕುಮಾರ್ ತಿಳಿಸಿದ್ದಾರೆ. 

ಬೆಂಗಳೂರಿನಲ್ಲಿ ಸಿಕ್ಕ ಯಶಸ್ವಿನಿಂದ ಪ್ರೇರಣೆಗೊಂಡ ಅವರು ತಮ್ಮ ಇವಿ ಉತ್ಫಾದನಾ ಘಟಕವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಉತ್ಸಹಕರಾಗಿದ್ದಾರೆ. ಇಲೆಕ್ಸ್ ಮೊಬಿಲಿಟಿ ಸರಕು ದ್ವಿಚಕ್ರ ವಾಹನ ಸುಮಾರು 300 ಕೆಜಿ ಸರಕು ಸಾಗಿಸುವ ಸಾಮಾಥ್ರ್ಯ ಹೊಂದಿದ್ದು, ಒಂದೇ ದಿನ 15 ವಾಹನಗಳು ಬುಕಿಂಗ್ ಆಗಿದ್ದು, ರಾಜ್ಯದ ಇವಿ ಮಚೆರ್ಂಟ್ ಆಸೋಸಿಯೇಸನ್ಸ್‍ನಿಂದ ಸುಮಾರು 400 ಪ್ರತಿಕ್ರಿಯೆ ವ್ಯಕ್ತವಾಗಿದೆ. ದಿನಬಳಕೆ ವಸ್ತು ಸಾಗಾಣಿಕೆಗೆ ಈ ವಾಹನ ಯೋಗ್ಯವಾಗಿದೆ ಎಂದು ಮಳಿಗೆಯ ಪ್ರತಿನಿಧಿ ಸಮಿತ್ ಅಗರವಾಲ್ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News