ಮಹಾರಾಷ್ಟ್ರ: ವಿಶ್ವಾಸಮತಯಾಚನೆಯಲ್ಲಿ ಏಕನಾಥ್ ಶಿಂಧೆಗೆ ಜಯ

Update: 2022-07-04 16:12 GMT

ಮುಂಬೈ,ಜು.4: ಮಹಾರಾಷ್ಟ್ರ ವಿಧಾನಸಭೆಯ ಎರಡು ದಿನಗಳ ವಿಶೇಷ ಅಧಿವೇಶನದ ಕೊನೆಯ ದಿನವಾಗಿದ್ದ ರವಿವಾರ ಮುಖ್ಯಮಂತ್ರಿ ಏಕನಾಥ ಶಿಂದೆಯವರು 164-99 ಮತಗಳ ಅಂತರದಿಂದ ವಿಶ್ವಾಸ ಮತವನ್ನು ಗೆದ್ದುಕೊಂಡಿದ್ದಾರೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇತ್ತೀಚಿಗೆ ಶಿವಸೇನೆ ಶಾಸಕರೋರ್ವರ ನಿಧನದಿಂದಾಗಿ ಅದು 287ಕ್ಕೆ ಕುಸಿದಿದೆ. ಬಹುಮತವನ್ನು ಸಾಧಿಸಲು 144 ಶಾಸಕರ ಬೆಂಬಲ ಅಗತ್ಯವಾಗಿತ್ತು.

ಈ ನಡುವೆ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಅಜಯ್ ಚೌಧರಿಯವರ ಬದಲು ಶಿಂದೆಯವರನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮರುಸ್ಥಾಪಿಸಿದ್ದು,‌ ಇದು ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆಯವರಿಗೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ. ಶಿವಸೇನೆಯ ಮುಖ್ಯ ಸಚೇತಕರಾಗಿ ಠಾಕ್ರೆ ಬಣಕ್ಕೆ ಸೇರಿದ ಸುನಿಲ್ ಪ್ರಭು ಬದಲು ಶಿಂದೆ ಬಣದ ಭರತ್ ಗೋಗಾವಲೆ ಅವರ ನೇಮಕಾತಿಯನ್ನೂ ನಾರ್ವೇಕರ್ ಅಂಗೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News