×
Ad

ಪೌರಕಾರ್ಮಿಕರ ಮುಷ್ಕರದಿಂದ ಮನೆ ಕಸ ಸಂಗ್ರಹಣೆಯಲ್ಲಿ ವ್ಯತ್ಯಯವಾಗಿಲ್ಲ: ಬಿಬಿಎಂಪಿ

Update: 2022-07-04 21:56 IST

ಬೆಂಗಳೂರು, ಜು.4: ನಗರದಲ್ಲಿ ಮನೆ ಮನೆಯಿಂದ ಕಸವನ್ನು ಸಂಗ್ರಹಿಸುವವರು ಪೌರಕಾರ್ಮಿಕರಾಗುವುದಿಲ್ಲ. ಹಾಗಾಗಿ ಮನೆಯಲ್ಲಿ ಕಸ ತೆಗೆಯುವ ವಿಚಾರವಾಗಿ ಯಾವುದೇ ದೂರುಗಳು ಬಂದಿಲ್ಲ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಶರತ್ ಬಿ. ತಿಳಿಸಿದ್ದಾರೆ.  

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರಕಾರ್ಮಿಕರು ಮುಷ್ಕರ ನಡೆಸುತ್ತಿರುವ ಕಾರಣ ಮನೆಗಳಲ್ಲಿ ಕಸ ವಿಲೇವಾರಿ ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ವ್ಯತ್ಯಯವಾಗಲಿಲ್ಲ. ಏಕೆಂದರೆ ಅವರನ್ನು ಟೆಂಡರ್ ಪಡೆದವರು ನೇಮಿಸಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು. 

ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ವಿಪೀಂಗ್ ಯಂತ್ರಗಳನ್ನು ರಾತ್ರಿ ವೇಳೆಯಲ್ಲಿ ಬಳಸಿಕೊಂಡು ರಸ್ತೆಗಳನ್ನು ಗುಡಿಸಲಾಗುತ್ತಿದೆ. ಇನ್ನು ಮಂದೆ ರಾತ್ರಿ ಮತ್ತು ಹಗಲು ಕಾರ್ಯನಿರ್ವಹಿಸಲು ಕ್ರಮ ವಹಿಸಲಾಗುವುದು. ಈ ನಿಟ್ಟಿನಲ್ಲಿ ಅದಕ್ಕೆ ಅಲ್ಪಾವಧಿ ಟೆಂಡರ್ ಹೊರಡಿಸಿ, ಖಾಸಗಿ ಅವರಿಂದ ಕಿ.ಮೀ.ನಂತೆ ದರ ನಿರ್ಧರಿಸಲಾಗುವುದು. ಇದನ್ನು ನಿರ್ವಹಿಸಲು ಶೇ.20ರಷ್ಟು ಪೌರಕಾರ್ಮಿಕರನ್ನು ಅಂದರೆ 4,000 ಕಾರ್ಮಿಕರನ್ನು ಬಳಸಿಕೊಳ್ಳಲಾಗುವುದು ಎಂದರು.  

ಓಕಳೀಪುರ ಜಂಕ್ಷನ್ ಕಾಮಗಾರಿಗೆ ಸಂಬಂಧಿಸಿದಂತೆ ಬಂಡೆಗಳಿಗೆ ಜಿಲೇಟಿನ್ ಸ್ಫೋಟವನ್ನು ಹಾಕುವುದರ ಕುರಿತು ಬಿಬಿಎಂಪಿ ಅಧಿಕಾರಿಗಳು ಸ್ಥಳ ಪರಿಶೀಲನೆಯನ್ನು ನಡೆಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News