ಎಡಿಜಿಪಿ ಅಮೃತ್ ಪೌಲ್ ಬಂಧನ ವಿಚಾರ: ಐಪಿಎಸ್ ಅಧಿಕಾರಿ ಡಿ.ರೂಪಾ ಪ್ರತಿಕ್ರಿಯೆ ಏನು?

Update: 2022-07-04 18:22 GMT
ಅಮೃತ್ ಪೌಲ್ | ಐಪಿಎಸ್ ಅಧಿಕಾರಿ ಡಿ.ರೂಪಾ

ಬೆಂಗಳೂರು: ಜು.4: 545 ಪಿಎಸ್ಸೈ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಎಡಿಜಿಪಿ ಅಮೃತ್ ಪೌಲ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿರುವ ವಿಚಾರಕ್ಕೆ ಸಂಬಂಧಿಸಿ ಐಪಿಎಸ್ ಅಧಿಕಾರಿ ಡಿ.ರೂಪಾ ಪ್ರತಿಕ್ರಿಯಿಸಿದ್ದಾರೆ. 

ಸೋಮವಾರ ಟ್ವೀಟ್ ಮಾಡಿರುವ ಅವರು, ಐಪಿಎಸ್ ಅಧಿಕಾರಿಗಳ ಮೇಲೆ ಯಾವುದೇ ಶಿಸ್ತುಕ್ರಮ ಆಗುವುದಿಲ್ಲ ಎಂದು ಬಹಳಷ್ಟು ಜನ ನನಗೆ ಹೇಳ್ತಾ ಇದ್ದದ್ದು ಸುಳ್ಳು ಅಂತ ಇಂದಿನ ಮೊತ್ತ ಮೊದಲ ಬಾರಿಗೆ ರಾಜ್ಯದಲ್ಲಿ ನಡೆದ ಎಡಿಜಿ ಹುದ್ದೆಯ ಐಪಿಎಸ್ ಅಧಿಕಾರಿ ಬಂಧನ ಸಾಕ್ಷಿ ಎಂದು ಹೇಳಿದ್ದಾರೆ.

'ಕಾನೂನಿನ ಮುಂದೆ ಎಲ್ಲರೂ ಒಂದೇ. ಅಖಿಲ ಭಾರತ ಸಿವಿಲ್ ಸೇವಾ ನಿಯಮದಡಿ ಬಂಧನ ಆದರೆ ಸಸ್ಪೆಂಡ್ ಕೂಡ ಮಾಡಲೇಬೇಕಾಗುತ್ತದೆ' ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News