×
Ad

ಮೂಡುಬಿದಿರೆ : ಮೈಟ್ ಇಂಜಿನಿಯರಿಂಗ್ ಕಾಲೇಜು ಆವರಣ ಗೋಡೆ ಕುಸಿದು ವಾಹನಗಳಿಗೆ ಹಾನಿ

Update: 2022-07-05 20:20 IST

ಮೂಡುಬಿದಿರೆ: ಸಮೀಪದ ಮಿಜಾರಿನಲ್ಲಿ ಎಂಜಿನಿಯರಿಂಗ್ ಕಾಲೇಜಿನ ಆವರಣ ಗೋಡೆ ಕುಸಿದುಬಿದ್ದು ಮೂರು ವಾಹನಗಳಿಗೆ ಭಾರೀ ಹಾನಿಯಾಗಿದೆ.

ಮೂಡುಬಿದಿರೆ ತಾಲ್ಲೂಕಿನ ವಿವಿಧೆಡೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮೈಟ್ ಎಂಜಿನಿಯರಿಂಗ್ ಕಾಲೇಜಿನ (ಮ್ಯಾಂಗಲುರ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಇಂಜಿನಿಯರಿಂಗ್) ಆವರಣಗೋಡೆ ಮಂಗಳವಾರ ಮಧ್ಯಾಹ್ನ ಕುಸಿದು ಬಿದ್ದು ಮೂರು ವಾಹನಗಳಿಗೆ ಭಾರೀ  ಹಾನಿಯಾಗಿದೆ.

ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶ ನಡೆಯುತ್ತಿದ್ದು ಆವರಣಗೋಡೆಯ ಬದಿಯಲ್ಲಿ ಪೋಷಕರ ವಾಹನಗಳನ್ನು ನಿಲ್ಲಿಸಲಾಗಿತ್ತು. ನಿರಂತರ ಮಳೆಯಿಂದಾಗಿ ಸುಮಾರು 20 ಅಡಿ ಎತ್ತರದಲ್ಲಿದ್ದ ಆವರಣಗೋಡೆ ಕುಸಿದು ಹತ್ತಿರದಲ್ಲಿದ್ದ ಮೂರು ಕಾರುಗಳ ಮೇಲೆ ಬಿದ್ದು ಹಾನಿಗೊಳಿಸಿದೆ. ಅದೃಷ್ಟವಶಾತ್ ಯಾವುದೇ ಸಾವು  ನೋವು ಸಂಭವಿಸಿಲ್ಲ.

ಮೈಟ್ ಆವರಣಗೋಡೆ ಇರುವ ಜಾಗ ಈ ಹಿಂದೆ ನೀರಿನ ಒರತೆಯಿದ್ದ ಗದ್ದೆಯಾಗಿತ್ತೆನ್ನಲಾಗಿದೆ. ಅಲ್ಲದೆ ಹತ್ತಿರದಲ್ಲಿ ನೀರು ಹರಿಯುವ ಸಣ್ಣಪುಟ್ಟ ತೋಡುಗಳಿದ್ದು ಖಾಸಗಿಯವರು ಅತಿಕ್ರಮಿಸಿದ್ದಾರೆಂದು ಸ್ಥಳೀಯರು ದೂರಿದ್ದಾರೆ. ಇದರಿಂದ  ಮಳೆಗಾಲದಲ್ಲಿ ಇಲ್ಲಿ ನೀರು ಹರಿಯುವುದಕ್ಕೆ ತಡೆ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News