ಎಲ್ಲೆಂದರಲ್ಲಿ ಕಸ ಹಾಕುವವರ ಬಗ್ಗೆ ಮಾಹಿತಿ ನೀಡಿದರೆ 'ಪರಿಸರ ಹಿತೈಷಿ ಪ್ರಮಾಣ ಪತ್ರ': BBMP ಘೋಷಣೆ

Update: 2022-07-06 13:52 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.6: ನಗರದಲ್ಲಿ ಬ್ಲ್ಯಾಕ್‍ಸ್ಪಾಟ್‍ಗಳು ಅಧಿಕವಾಗುತ್ತಿದ್ದು, ಅಲ್ಲಿ ಕಸ ಹಾಕುವವರ ಬಗ್ಗೆ ಮಾಹಿತಿ ನೀಡಿ ಕಸರಹಿತ ತಾಣವನ್ನಾಗಿ ಮಾಡಲು ಸಹಕರಿಸಿದ ನಾಗರಿಕರಿಗೆ ‘ಪರಿಸರ ಹಿತೈಷಿ’ ಎಂಬ ಪ್ರಮಾಣಪತ್ರ ನೀಡಿ ಮುಖ್ಯ ಆಯುಕ್ತರು ಗೌರವಿಸಲಿದ್ದಾರೆ. ಆದರೆ ಮಾಹಿತಿ ಒದಗಿಸುವ ನಾಗರಿಕರ ಹೆಸರನ್ನು ಗೋಪ್ಯವಾಗಿರಿಸಲಾಗುತ್ತದೆ ಎಂದು ಬಿಬಿಎಪಿ (BBMP) ತಿಳಿಸಿದೆ.

ಕಸ ಎಸೆಯುವುದರಿಂದಾಗುವ ಆರೋಗ್ಯ ಸಮಸ್ಯೆ, ಪರಿಣಾಮಗಳನ್ನು ತಿಳಿಸಿ, ಅದನ್ನು ನಿಲ್ಲಿಸಿ ಎಂಬ ಪ್ರಚಾರವನ್ನೂ ಕೈಗೊಳ್ಳಲಾಗಿದೆ. ನಗರದಲ್ಲಿ ಅನಗತ್ಯವಾಗಿ ಕಸವನ್ನು ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಬಿಎಂಪಿ ತಿಳಿಸಿದೆ.

ರಸ್ತೆಗಳಲ್ಲಿ ಕಸ ಸಂಗ್ರಹವಾಗುತ್ತಿರುವ ತಾಣಗಳನ್ನು ಗುರುತಿಸಿ ಕ್ಯಾಮೆರಾ ಅಳವಡಿಸಿ, ಹತ್ತಿರದ ಮನೆ ಅಥವಾ ವಾಣಿಜ್ಯ ಅಂಗಡಿಗಳಲ್ಲಿ ‘ಮಾನಿಟರ್’ ಅನ್ನು ಇರಿಸಲಾಗುವುದು. ಅದರಂತೆ ಕಸ ಹಾಕುವವರನ್ನು ಕಂಡು ಹಿಡಿದು ದಂಡ ವಿಧಿಸುವ, ಪ್ರಕರಣ ದಾಖಲಿಸುವ ಪ್ರಕ್ರಿಯೆಯನ್ನು ಅಧಿಕಾರಿಗಳು ನಿರ್ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News