ನಾಗೇಶ್ ಒಬ್ಬ ಅವಿವೇಕಿ ಸಚಿವ: ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ.

Update: 2022-07-06 14:31 GMT

ಬೆಂಗಳೂರು, ಜು.6: ಬಿ.ಸಿ.ನಾಗೇಶ್ ಒಬ್ಬ ಅವಿವೇಕಿ ಸಚಿವನಾಗಿದ್ದರಿಂದಲೇ ಇಷ್ಟು ಅವಾಂತರಗಳು ನಡೆದಿವೆ ಎಂದು ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಅಸಮಾಧಾನ ವ್ಯಕ್ತಪಡಿಸಿದರು.

ಬುಧವಾರ ನಗರದ ಗಾಂಧಿಭವನ ಸಭಾಂಗಣದಲ್ಲಿ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ಬಿಜೆಪಿ ಸರಕಾರ ಯಾವುದೇ ರಾಜ್ಯದಲ್ಲಿ ಇರಲಿ, ಅಲ್ಲಿ ಗೃಹ ಮತ್ತು ಶಿಕ್ಷಣ ಇಲಾಖೆಗೆ ಕಟ್ಟರ್ ಆರೆಸ್ಸೆಸ್ ಕಾರ್ಯಕರ್ತರನ್ನು ಸಚಿವರನ್ನಾಗಿ ನೇಮಿಸಿ, ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಹುನ್ನಾರ ಜಾರಿಯಲ್ಲಿದೆ. ಇದಕ್ಕೆ ಕರ್ನಾಟಕ ಕೂಡ ಹೊರತಾಗಿಲ್ಲ. ಬಿ.ಸಿ.ನಾಗೇಶ್ ಒಬ್ಬ ಅವಿವೇಕಿ ಸಚಿವನಾಗಿದ್ದರಿಂದಲೇ ಇಷ್ಟು ಅವಾಂತರಗಳು ನಡೆದಿವೆ. ಅವರು ಇಲಾಖೆಯ ಬೆಳವಣಿಗೆಗಳನ್ನು ಸೂಕ್ತ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.

ಬರುವ ದಿನಗಳು ಇನ್ನೂ ಅಪಾಯದಿಂದ ಕೂಡಿರಲಿವೆ. ಹಿಂದೂ ಧಾರ್ಮಿಕ ಮೂಲಭೂತವಾದವನ್ನು ಮಕ್ಕಳಲ್ಲಿ ತುಂಬಲು ವ್ಯವಸ್ಥಿತವಾಗಿ ಸಿದ್ಧತೆ ನಡೆದಿದೆ. ಇದು ಕೇವಲ ಆರಂಭ ಅಷ್ಟೇ. ಶಿಕ್ಷಣ ಕೇಸರಿಕರಣಕ್ಕೆ ಆರೆಸ್ಸೆಸ್ ಕೈ ಹಾಕಿ 20 ವರ್ಷ ಆಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಮಾತನಾಡಿ, ಹೊಲಸು ಮನುಷ್ಯ ತನಗೆ ಶೇ.40ರಷ್ಟು ಕಮಿಷನ್ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಕೇವಲ ಐದು ಸಾವಿರ ರೂ. ಸಂಬಳ ಪಡೆದಿದ್ದೇನೆ ಎಂದು ಹತಾಶೆಯಿಂದ ಹೇಳಿದ್ದಾನೆ ಎಂದು ಕುಟುಕಿದರು.

---------------------------

ಶೇ.80ರಷ್ಟು ಜೀ ಹುಜೂರ್ ಗಳು

ಪತ್ರಿಕೋದ್ಯಮದಲ್ಲಿ ಶೇ.80ರಷ್ಟು ಚಡ್ಡಿ ತೊಟ್ಟಿರುವವರು ಪತ್ರಕರ್ತರ ಸೋಗಿನಲ್ಲಿದ್ದಾರೆ. ಸತ್ಯ ಬರೆಯುವ ತಾಕತ್ತು ಇಲ್ಲದೇ ಅಪಪ್ರಚಾರ ಮಾಡಲಾಗುತ್ತಿದ್ದಾರೆ. ಮುಕುಂದಜೀ, ಸಂತೋಷ್ ಜೀ, ಪ್ರಲ್ಹಾದ್ ಜೋಶಿಜೀ ಹಾಗೂ ದತ್ತಾತ್ರೇಯ ಹೊಸಬಾಳೆಜೀಗಳು ನಿರ್ದೇಶಿಸಿದಂತೆ ಬಿಜೆಪಿ ಸರಕಾರ ನಡೆಯುತ್ತಿದೆಯೇ? 

-ಬಿ.ಎಂ.ಹನೀಫ್, ಹಿರಿಯ ಪತ್ರಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News