ತೆರಿಗೆ ಪಾವತಿ ಮಾಡದ ಕಾರಣ: ಡೋಲೋ 650 ಮಾತ್ರೆ ತಯಾರಿಕಾ ಕಂಪೆನಿ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ದಾಳಿ

Update: 2022-07-06 16:46 GMT

ಬೆಂಗಳೂರು, ಜು.6: ಪ್ರಸ್ತುತ ವಾರ್ಷಿಕ ಆದಾಯಕ್ಕೆ ಅನುಗುಣವಾಗಿ ತೆರಿಗೆ ಪಾವತಿಸದ ಆರೋಪ ಹಿನ್ನೆಲೆ ಡೋಲೋ 650 ಮಾತ್ರೆ ತಯಾರಿಕಾ ಮೈಕ್ರೋ ಲ್ಯಾಬ್ಸ್ ಕಂಪೆನಿ ಪ್ರಧಾನ ಕಚೇರಿ ಸೇರಿದಂತೆ ದೇಶದ 40 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬುಧವಾರ ಬೆಂಗಳೂರಿನ ರೇಸ್‍ಕೋರ್ಸ್‍ನಲ್ಲಿರುವ ಮೈಕ್ರೋ ಲ್ಯಾಬ್ಸ್ ಕಂಪೆನಿ ಪ್ರಧಾನಕಚೇರಿ, ತಮಿಳುನಾಡು, ಗೋವಾ, ಪಂಜಾಬ್, ಮುಂಬೈ, ಹೊಸದಿಲ್ಲಿ ಹಾಗೂ ಸಿಕ್ಕೀಂ ಸೇರಿದಂತೆ ದೇಶದ 40 ಕಡೆಗಳಲ್ಲಿ 200ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ. 

ಕಂಪೆನಿ ಸಿಎಂಡಿ ದಿಲೀಪ್ ಸುರಾನಾ, ನಿರ್ದೇಶಕ ಆನಂದ್ ಸುರಾನ ನಿವಾಸದ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ಕೋವಿಡ್ ಸಂದರ್ಭದಲ್ಲಿ ಸುಮಾರು 350 ಕೋಟಿ ಡೋಲೋ ಮಾತ್ರೆಗಳ ಮಾರಾಟದಿಂದ ಮೈಕ್ರೋ ಲ್ಯಾಬ್ಸ್ ಕಂಪೆನಿ 570 ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಆದರೆ, ಆದಾಯಕ್ಕೆ ಪ್ರತಿಯಾಗಿ ತೆರಿಗೆ ಪಾವತಿಸಿರಲಿಲ್ಲ ಎಂಬ ಆರೋಪ ಕೇಳಿಬಂದ ಹಿನ್ನೆಲೆ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News