ವಿಂಬಲ್ಡನ್ ಟೆನಿಸ್ : ಸೆಮಿಫೈನಲ್ ಪ್ರವೇಶಿಸಿದ ರಫೇಲ್ ನಡಾಲ್

Update: 2022-07-07 01:50 GMT

ನ್ಯೂಯಾರ್ಕ್: ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲದ ಸುಧೀರ್ಘ ಹೋರಾಟದಲ್ಲಿ ಟೇಲರ್ ಫ್ರಿಝ್ ಅವರನ್ನು ಸೋಲಿಸಿದ ಟೆನಿಸ್ ದಂತಕಥೆ ರಫೇಲ್ ನಡಾಲ್ ವಿಂಬಲ್ಡನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ತಲುಪಿದ್ದಾರೆ. ‌

ಎರಡನೇ ಶ್ರೇಯಾಂಕದ ನಡಾಲ್, ಟೇಲರ್ ಅವರ ಸವಾಲನ್ನು 3-6, 7-5, 3-6, 7-5, 7-6 (10/4) ಅಂತರದಿಂದ ಬದಿಗೊತ್ತಿ ಸೆಮಿಫೈನಲ್ ಪ್ರವೇಶ ಪಡೆದರು.

ನಡಾಲ್ ತಮ್ಮ ಮೂರನೇ ಗ್ರ್ಯಾಂಡ್‍ಸ್ಲಾಂ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಈ ವರ್ಷ ಈಗಾಗಲೇ ಅವರು ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ ಗೆದ್ದಿದ್ದಾರೆ.

ತಮ್ಮ ವೃತ್ತಿಜೀವನದ 23ನೇ ಪ್ರಮುಖ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿರುವ ನಡಾಲ್ ಪಂದ್ಯದ ಎರಡನೇ ಸೆಟ್‍ನಲ್ಲಿ ವೈದ್ಯಕೀಯ ಟೈಮ್ ಔಟ್ ಪಡೆದು ಚಿಕಿತ್ಸೆ ಪಡೆದಾಗ ಅವರ ಸಾಮರ್ಥ್ಯದ ಬಗ್ಗೆ ಅನುಮಾನ ಹುಟ್ಟಿಕೊಂಡಿತ್ತು. ಆದರೆ ನಾಲ್ಕು ಗಂಟೆ ಇಪ್ಪತ್ತು ನಿಮಿಷಗಳ ಸುಧೀರ್ಘ ಹೋರಾಟದ ಬಳಿಕ ಕೊನೆಗೂ ನಡಾಲ್ ಕೈ ಮೇಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News