ಮುಲ್ಕಿ ಪೊಲೀಸರಿಂದ ಗಡಿಪ್ರದೇಶದಲ್ಲಿ ವಾಹನ ತಪಾಸಣೆ

Update: 2022-07-07 17:10 GMT

ಮುಲ್ಕಿ, ಜು.7: ಬಕ್ರೀದ್ ಹಬ್ಬ ಇರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಮುಲ್ಕಿ ಪೊಲೀಸರು ಠಾಣಾ‌ ವ್ಯಾಪ್ತಿಯ ಗಡಿಪ್ರದೇಶಗಳಲ್ಲಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದಾರೆ.

ಉಡುಪಿ ಜಿಲ್ಲೆಯಿಂದ ಬರುವ ವಾಹನಗಳನ್ನು ಬಪ್ಪನಾಡು ಚೆಕ್ ಪೋಸ್ಟ್‌ನಲ್ಲಿ ತಪಾಸಣೆಗೆ ಒಳಪಡಿಸಿದರೆ, ಗ್ರಾಮೀಣ ಭಾಗದ ಸೂರಿಂಜೆ ಸಂಧಿಸುವ ನಡುಗೋಡು ಹಾಗೂ ಮೂಬಿದಿರೆ ಭಾಗದಿಂದ ಬರುವ ವಾಹನಗಳನ್ನು ಮೂರು ಕಾವೇರಿ ಪಟ್ಟಣದಲ್ಲಿ ತೀವ್ರ ತಪಾಸಣೆಗೆ ಒಳಪಡಿಸಲಾಯಿತು.

ಗಡಿಭಾಗವಾಗಿ ಸಂಚರಿಸುತ್ತಿದ್ದ ಎಲ್ಲಾ ವಾಹನಗಲನ್ನು ತಪಾಸಣೆಗೆ ಒಳಪಡಿಸುತ್ತಿದ್ದ ಪೊಲೀಸರು, ದ್ವಿಚಕ್ರಗಳ ಮೂಲಕ ಕೈಚೀಲಗಳಲ್ಲಿ ಸಾಗಿಸುತ್ತಿದ್ದ ಸಾಮಗ್ರಿಗಳನ್ನೂ  ಬಿಡದೆ ತಪಾಸಣೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. 

ಮುಲ್ಕಿ ಪೊಲೀಸ್ ವೃತ್ತ ನಿರೀಕ್ಷಕ ಕುಸುಮಾಧರ ಅವರ ನೇತೃತ್ವದಲ್ಲಿ ಸಬ್‌ಇನ್ ಸ್ಪೆಕ್ಟರ್ ಗಳಾದ ವಿನಾಯಕ ತೋರಗಲ್ ಹಾಗೂ ಮಾರುತಿ ಪವಾರ್ ಹಾಗೂ ಸಿಬ್ಬಂದಿ ತಪಾಸಣೆಯಲ್ಲಿ ಭಾಗವಹಿಸಿದ್ದರು.

"ಮುಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದೆ. ಅಲ್ಲದೆ, ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ವಾಹನ ತಪಾಸಣೆಯನ್ನು ಕೈಗೊಳ್ಳಲಾಗಿದೆ. ಇದು ದೈನಂದಿನ ಪ್ರಕ್ರಿಯೆ. ಇದರಲ್ಲಿ ವಿಶೇಷವೇನೂ ಇಲ್ಲ"

- ಕುಸುಮಾಧರ, ಪೊಲೀಸ್ ವೃತ್ತ ನಿರೀಕ್ಷಕರು
ಮುಲ್ಕಿ ಪೊಲೀಸ್ ಠಾಣೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News