ಪಠ್ಯಪುಸ್ತಕ ವಿವಾದಕ್ಕೆ ಸ್ಪಷ್ಟನೆ ನೀಡಿದ ಬೆಂಗಳೂರು ವಿವಿ

Update: 2022-07-08 17:14 GMT

ಬೆಂಗಳೂರು, ಜು.8: ಪರಿಷ್ಕರಿಸಿದ ಎರಡನೆ ಸೆಮಿಸ್ಟರ್ ಕನ್ನಡ ಭಾಷಾ ವಿಷಯದ ಪಠ್ಯಕ್ರಮ, ಪರಿವಿಡಿ, ಸಾರಾಂಶವನ್ನು ವಾಟ್ಸಾಪ್ ಮೂಲಕ ಪಿ.ಡಿ.ಎಫ್ ಡಾಕ್ಯೂಮೆಂಟ್ ಅನ್ನು ಕನ್ನಡ ಭಾಷಾ ಶಿಕ್ಷಕರಿಗೆ ಮೇ 27 ರಂದೇ ಕಳುಹಿಸಕೊಡಲಾಗಿದೆ. ಅಲ್ಲದೆ ಗ್ರಂಥಾಲಯ ಅಥವಾ ವೆಬ್‍ಸೈಟ್‍ನಲ್ಲಿ ಪಠ್ಯವನ್ನು ಪಡೆದು ಕನ್ನಡ ಭಾಷಾ ಶಿಕ್ಷಕರುಗಳು ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು. ಹಾಗಾಗಿ ಪಠ್ಯ ಪುಸ್ತಕಗಳನ್ನು ಮುದ್ರಿಸಿಕೊಡಬೇಕು ಎಂಬ ನಿಯಮಗಳು ಇರುವುದಿಲ್ಲ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಸ್ಪಷ್ಟನೆ ನೀಡಿದೆ.  

ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲು ಪೂರ್ಣ ಪ್ರಮಾಣದ ಮಾಹಿತಿಗಳನ್ನೊಳಗೊಂಡ ಪಠ್ಯ ಪುಸ್ತಕಗಳನ್ನು ಮುದ್ರಿಸಿ ಕಳುಹಿಸಿಕೊಡುವುದು. ಸಂಪ್ರದಾಯವಾಗಿದೆ. ಈ ಕ್ರಮವು ಪೂರಕ ಕ್ರಮವಾಗಿದೆ, ಹೊರತು ಅವಶ್ಯಕವಾಗಿ ಜರುಗಬೇಕಾದ ಜವಾಬ್ದಾರಿಯಾಗಿರುವುದಿಲ್ಲ ಎಂದು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News