×
Ad

ಬೆಂಗಳೂರು | ಗಾಂಜಾ ಮಾರಾಟ ಆರೋಪ ಪ್ರಕರಣ: ಇದೇ ಮೊದಲ ಬಾರಿಗೆ ಆರೋಪಿಗಳ ಆಸ್ತಿ ಮುಟ್ಟುಗೋಲು

Update: 2022-07-09 21:06 IST

ಬೆಂಗಳೂರು, ಜು.9: ಮಾದಕ ವಸ್ತು ಸರಬರಾಜು ಆರೋಪ ಪ್ರಕರಣ ಸಂಬಂಧ ಇದೇ ಮೊದಲ ಬಾರಿಗೆ ಸಿಸಿಬಿ ಪೊಲೀಸರು ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿದ್ದಾರೆ.

ಮಾದಕವಸ್ತು ಸರಬರಾಜಿನಿಂದಲೇ ಸಂಪಾದಿಸಿದ್ದ ಮಲ್ಲೇಶ್ ಎಂಬ ಆರೋಪಿಯ ಸುಮಾರು 50 ಲಕ್ಷ ರೂ ಮೌಲ್ಯದ ವಿವಿಧ ಆಸ್ತಿಯನ್ನು ಸಿಸಿಬಿ ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ.

ಆರೋಪಿ ಮಲ್ಲೇಶ್ ಮೇಲೆ ಕಳೆದ 12 ವರ್ಷಗಳ ಅವಧಿಯಲ್ಲಿ ನಗರದ ವಿವಿಧೆಡೆ 7 ಪ್ರಕರಣಗಳು ದಾಖಲಾಗಿದ್ದವು. ಗಾಂಜಾ ಮಾರಾಟದಿಂದ ಸಂಪಾದಿಸಿದ ಹಣದಲ್ಲಿ ಪತ್ನಿ ಹಾಗೂ ಮಗನ ಹೆಸರಿನಲ್ಲಿ 8 ಎಕರೆ ಕೃಷಿ ಭೂಮಿಯನ್ನೂ ಖರೀದಿಸಿದ್ದಾನೆ ಎಂದು ಹೇಳಲಾಗಿದೆ.

ಈ ಬಗ್ಗೆ ಮಲ್ಲೇಶ್ ಆಸ್ತಿ ಮುಟ್ಟುಗೋಲಿಗೆ ಅನುಮತಿ ಕೋರಿ ಸಿಸಿಬಿ ಪೊಲೀಸರು ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು. ಸಕ್ಷಮ ಪ್ರಾಧಿಕಾರದಿಂದ ಅನುಮತಿ ದೊರೆತ ಹಿನ್ನೆಲೆಯಲ್ಲಿ ಆರೋಪಿಯ 50 ಲಕ್ಷ ಮೌಲ್ಯದ 8 ಎಕರೆ ಜಮೀನು, ಹಾಗೂ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 3 ಲಕ್ಷ ರೂಪಾಯಿ ನಗದನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News