ಝೀ ನ್ಯೂಸ್ ಬಿಟ್ಟ ಸುಧೀರ್ ಚೌಧರಿ ಆಜ್ ತಕ್ ಗೆ ಸಲಹಾ ಸಂಪಾದಕ

Update: 2022-07-11 17:23 GMT
Photo: twitter/imrajchoudhary7

ಹೊಸದಿಲ್ಲಿ: 'ಝೀ ಗ್ರೂಪ್'ನ ಮಾಜಿ ಮುಖ್ಯ ಸಂಪಾದಕ ಮತ್ತು ಸಿಇಒ ಸುಧೀರ್ ಚೌಧರಿ ಹಿಂದಿ ಸುದ್ದಿ ವಾಹಿನಿ 'ಆಜ್‌ತಕ್' ಮೂಲಕ ತಮ್ಮ ವೃತ್ತಿಜೀವನವನ್ನು ಮುಂದುವರೆಸಲಿದ್ದಾರೆ. ಆಜ್‌ತಕ್‌ ವಾಹಿನಿಯಲ್ಲಿ ಸಲಹಾ ಸಂಪಾದಕರಾಗಿ (ಕನ್ಸಲ್ಟಿಂಗ್ ಎಡಿಟರ್) ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ newslaundry.com ವರದಿ ಮಾಡಿದೆ.

ಸುಧೀರ್ ಚೌಧರಿ ಅವರ ನೇಮಕಕ್ಕೆ ಸಂಬಂಧಿಸಿದಂತೆ ಇಂಡಿಯಾ ಟುಡೇ ಗ್ರೂಪ್‌ನ ಉಪಾಧ್ಯಕ್ಷ ಕಲಿ ಪುರಿ ಅವರು ಆಂತರಿಕ ಮೇಲ್ ಅನ್ನು ರವಾನಿಸಿದ್ದು. ಈ ಮೇಲ್‌ನಲ್ಲಿ,   'ಸುಧೀರ್ ಚೌಧರಿ 'ಆಜ್ ತಕ್' ಗೆ ಸಲಹಾ ಸಂಪಾದಕರಾಗಿ ಸೇರಲಿದ್ದಾರೆ ಎಂದು ನಿಮಗೆಲ್ಲರಿಗೂ ತಿಳಿಸಲು ನನಗೆ ತುಂಬಾ ಸಂತೋಷವಾಗಿದೆ.ʼ ಎಂದು ಕಲಿಪುರಿ ಅವರು ಬರೆದಿದ್ದಾರೆ.

  ಸುಧೀರ್‌ ಚೌಧರಿ ಜೊತೆಗೆ ಆಜ್ ತಕ್ ತಮ್ಮ 100 ಮಿಲಿಯನ್ ವೀಕ್ಷಕರಿಗೆ ಹೊಸ ಕಾರ್ಯಕ್ರಮವನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಇದನ್ನು ಸುಧೀರ್ ಚೌಧರಿ ಅವರು ನಿರೂಪಿಸಲಿದ್ದಾರೆ. ವಾರ್ತಾ ನಿರ್ದೇಶಕಿ ಸುಪ್ರಿಯಾ ಪ್ರಸಾದ್ ಅವರ ನಿರ್ದೇಶನದಲ್ಲಿ ಕಾರ್ಯಕ್ರಮವನ್ನು ತರಲಾಗುವುದು ಎಂದು ವರದಿಯಾಗಿದೆ.

ಸ್ವಂತ ಉದ್ಯಮವನ್ನು ಪ್ರಾರಂಭಿಸುವುದಾಗಿ ಹೇಳಿ ಚೌಧರಿ ಅವರು ಜೂನ್ ಅಂತ್ಯದಲ್ಲಿ ಝೀ ನ್ಯೂಸ್‌ನ ಮುಖ್ಯ ಸಂಪಾದಕ ಮತ್ತು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News