ಭಾರೀ ಮಳೆ; ಏಳಿಂಜೆ- ಪಠ್ಯ ಸಂಪರ್ಕಿಸುವ ಕಾಲು ಸಂಕದ ಸಂಪರ್ಕ ಕಡಿತ

Update: 2022-07-12 15:49 GMT

ಕಿನ್ನಿಗೋಳಿ: ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಮುಲ್ಕಿ ತಾಲೂಕಿನ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಳಿಂಜೆ- ಪಠ್ಯ ಸಂಪರ್ಕಿಸುವ ಕಾಲುಸಂಕದ ಸಂಪರ್ಕ ಕಡಿತಗೊಂಡಿದ್ದು, ಸಣ್ಣ ನದಿ ದಾಟಲು ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದರ ಪಕ್ಕದಲ್ಲಿ ಶ್ರೀಲಕ್ಷ್ಮಿಜನಾರ್ದನ ದೇವಸ್ಥಾನವಿದ್ದು ಪಠ್ಯ ಪರಿಸರದ ಹಲವಾರು ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಈ ಕಿರು ಸೇತುವೆಯ ಮೂಲಕ ಹಾದು ಹೋಗಬೇಕಿದೆ. ಇನ್ನೂ ಶಾಲೆಗೆ ಹೋಗುವ ಮಕ್ಕಳು ಇದೇ ದಾರಿಯಾಗಿ ಕಾಲ್ನಡಿಗೆಯಲ್ಲಿ ಹೋಗಬೇಕಿದೆ. ಭಾರೀ ಮಳೆ ಬಂದರೆ ಸಾಕು ಸೇತುವೆ ಮುಳುಗಡೆ ಯಾಗುತ್ತಿರುವುದರಿಂದ ಸುತ್ತು ಬಳಸಿಕೊಂಡು ರಿಕ್ಷಾ ಗಳ ಮೂಲಕ ಅಥವಾ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. 

ಇನ್ನು ಈ ಕಿರು ಸೇತುವೆ ಅಲ್ಲಲ್ಲಿ ಬಿರುಕುಬಿಟ್ಟಿದ್ದು ಸೇತುವೆ ಕುಸಿದು ಕೆಲವು ವರ್ಷಗಳಾಗಿದೆ. ನೂತನ ಸೇತುವೆ ನಿರ್ಮಾಣ ಇನ್ನೂ ಕಾರ್ಯಗತಗೊಂಡಿಲ್ಲ. ಈ ನಡುವೆ ಕುಸಿದ ಸೇತುವೆಯ ಇನ್ನೊಂದು ಪಾಶ್ವ ಜಲಾವೃತ ವಾಗಿದ್ದು,ಅಪಾಯಕಾರಿಯಾಗಿ ಪರಿಣಮಿಸಿದೆ.

ಕಳೆದ 4ವರ್ಷಗಳಿಂದ ಕಿರು ಸೇತುವೆ ನಿರ್ಮಾಣಕ್ಕೆ ಸ್ಥಳೀಯರು ಐಕಳ ಪಂಚಾಯತ್ ಹಾಗೂ ಜನಪ್ರತಿನಿಧಿ ಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಕಾರ್ಯಗತಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಪ್ರತಿನಿಧಿಗಳು, ತಹಶೀಲ್ದಾರ್ ಹಾಗೂ ಶಾಸಕರು ಕಿರು ಸೇತುವೆ ಮರು ನಿರ್ಮಾಣದ ಜೊತೆಗೆ ಗ್ರಾಮಸ್ಥರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

"ನನ್ನ‌ ಮನೆಯಿಂದ ಶ್ರೀಲಕ್ಷ್ಮಿಜನಾರ್ದನ ದೇವಸ್ಥಾನಕ್ಕೆ 5-10 ನಿಮಿಷದ ಕಾಲ್ನಡಿಗೆಯಿಂದ ಹೋಗಬೇಕು. ಈಗ ಸೇತುವೆ ನೀರಿನಲ್ಲಿ‌ ಮುಳುಗಿರುವ ಕಾರಣ 90-100 ಕೊಟ್ಟು‌ ಸುತ್ತುವರಿದು ರಿಕ್ಷಾದಲ್ಲಿ ಹೋಗಬೆಕಿದೆ. ನಮ‌ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು".
-ಪದ್ಮಿನಿ, 
ಐಕಳ ಗ್ರಾ.ಪಂ. ಮಾಜಿ ಅಧ್ಯಕ್ಷೆ ಹಾಗೂ ಸಾಮಾಜಿಕ ಕಾರ್ಯಕರ್ತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News