×
Ad

ಅಗ್ನಿಪಥ್ ಯೋಜನೆ ಪ್ರಶ್ನಿಸಿದ ಮನವಿ ಜು. 20ರಂದು ಹೈಕೋರ್ಟ್‌ನಲ್ಲಿ ವಿಚಾರಣೆ

Update: 2022-07-12 21:54 IST

ಹೊಸದಿಲ್ಲಿ, ಜು. 12: ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಿದ ಹಲವು ಮನವಿಗಳ ವಿಚಾರಣೆಯನ್ನು ಜುಲೈ 20ರಂದು ನಡೆಸಲಾಗುವುದು ಎಂದು ದಿಲ್ಲಿ ಉಚ್ಚ ನ್ಯಾಯಾಲಯ ಮಂಗಳವಾರ ತಿಳಿಸಿದೆ.

ಅಗ್ನಿಪಥ್ ಯೋಜನೆಯನ್ನು ಕೇಂದ್ರ ಸರಕಾರ ಜೂನ್ 14ರಂದು ಘೋಷಿಸಿತ್ತು. ಈ ಯೋಜನೆಯಲ್ಲಿ ಶಸಸ್ತ್ರ ಪಡೆಗಳಿಗೆ ನಾಲ್ಕು ವರ್ಷಗಳಿಗೆ ಯುವಕರನ್ನು ನೇಮಕ ಮಾಡುವ ಅವಕಾಶ ನೀಡಲಾಗಿತ್ತು. ಇದರಲ್ಲಿ ಶೇ. 25 ಮಂದಿಯನ್ನು ಮುಂದಿನ 15ಕ್ಕಿಂತಲೂ ಅಧಿಕ ವರ್ಷ ಉಳಿಸಿಕೊಳ್ಳಲಾಗುವುದು ಎಂದು ಕೇಂದ್ರ ಸರಕಾರ ಹೇಳಿತ್ತು. ಈ ಯೋಜನೆಯ ವಿರುದ್ಧ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು.
ಅಗ್ನಿಪಥ್ ಯೋಜನೆ ಪ್ರಶ್ನಿಸಿ ಸಲ್ಲಿಸಿದ ಇಂತಹದೇ ಮನವಿಗಳು ಉಚ್ಚ ನ್ಯಾಯಾಲಯದಲ್ಲಿ ಈಗಾಗಲೇ ವಿಚಾರಣೆಗೆ ಬಾಕಿ ಇದೆ. ಆದುದರಿಂದ ಇದನ್ನು ಒಟ್ಟಾಗಿ ವಿಚಾರಣೆ ನಡೆಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮುಖ್ಯ ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಹಾಗೂ   ಸುಬ್ರಹ್ಮಣೀಯಂ ಪ್ರಸಾದ್ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು.  

ಈ ಹಿನ್ನೆಲೆಯಲ್ಲಿ ಇಂತಹ ಎಲ್ಲ ಅರ್ಜಿಗಳನ್ನು ಜುಲೈ 20ರಂದು ವಿಚಾರಣೆ ನಡೆಸಲಾಗುವುದು ಎಂದು ಪೀಠ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News