ವೆಸ್ಟ್ ಇಂಡೀಸ್ ವಿರುದ್ಧ ಟ್ವೆಂಟಿ-20 ಸರಣಿ : ಭಾರತ ತಂಡದಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನವಿಲ್ಲ

Update: 2022-07-14 09:02 GMT
Photo:PTI

ಹೊಸದಿಲ್ಲಿ: ಬಿಸಿಸಿಐ ಆಯ್ಕೆ ಸಮಿತಿಯು ಮುಂಬರುವ  ವೆಸ್ಟ್ ಇಂಡೀಸ್  ವಿರುದ್ಧದ ಟ್ವೆಂಟಿ-20 ಸರಣಿ ಗೆ ಗುರುವಾರ ಭಾರತ  ಕ್ರಿಕೆಟ್ ತಂಡ  ಪ್ರಕಟಿಸಿದ್ದು, ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಜಸ್ ಪ್ರೀತ್ ಬುಮ್ರಾಗೆ  ಸ್ಥಾನ ನೀಡಲಾಗಿಲ್ಲ.

 ರೋಹಿತ್ ಶರ್ಮಾ ನಾಯಕತ್ವ ವಹಿಸಲಿದ್ದು, ಕೆ.ಎಲ್. ರಾಹುಲ್ ಉಪನಾಯಕನಾಗಿ ತಂಡಕ್ಕೆ ಮರಳಿದ್ದಾರೆ. ಆದರೆ ರಾಹುಲ್  ಅವರ ಫಿಟ್ನೆಸ್ ವಿಚಾರ ಇನ್ನೂ ಇತ್ಯರ್ಥವಾಗಿಲ್ಲ.

ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ವೆಸ್ಟ್ ಇಂಡೀಸ್ ವಿರುದ್ಧ ಟಿ-20  ತಂಡದ ಭಾಗವಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಯು ಜುಲೈ 29 ರಂದು ಆರಂಭವಾಗಲಿದ.  ಆದರೆ ಅದಕ್ಕೂ ಮೊದಲು ಜುಲೈ 22 ರಿಂದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕೂಡ ಆಡಲಾಗುತ್ತದೆ.

ಜುಲೈ 22ರಂದು ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧ ಪ್ರವಾಸದ ವೇಳೆ ಭಾರತವು 3 ಪಂದ್ಯಗಳ ಏಕದಿನ ಹಾಗೂ 5 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಆಡಲಿದೆ.  ಇಂಗ್ಲೆಂಡ್ ವಿರುದ್ದ ಏಕದಿನ ಸರಣಿ ಮುಗಿದ ಬೆನ್ನಿಗೆ ಜುಲೈ 18ರಂದು ಮ್ಯಾಂಚೆಸ್ಟರ್ ನಿಂದ ಪೋರ್ಟ್ ಆಫ್ ಸ್ಪೇನ್ ಗೆ ಭಾರತ ತಂಡ ಪ್ರಯಾಣಿಸಲಿದೆ.

ಕುಲದೀಪ್ ಯಾದವ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ, ಆದರೆ ಅವರ ಸೇರ್ಪಡೆ ಫಿಟ್‌ನೆಸ್‌ಗೆ ಒಳಪಟ್ಟಿರುತ್ತದೆ. ರವಿಚಂದ್ರನ್ ಅಶ್ವಿನ್ ಮುಂಬರುವ ಟ್ವೆಂಟಿ-20 ಸರಣಿಗೆ ಸ್ಥಾನ ಪಡೆದಿದ್ದಾರೆ

ಉಮ್ರಾನ್ ಮಲಿಕ್ ತಂಡದ ಭಾಗವಾಗಿಲ್ಲ ಹಾಗೂ  ಅರ್ಷದೀಪ್ ಸಿಂಗ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಆರ್ ಅಶ್ವಿನ್, ರವಿ ಬಿಷ್ಣೋಯಿ, ಕುಲದೀಪ್ ಯಾದವ್*, ಭುವನೇಶ್ವರ ಕುಮಾರ್ ಅವೇಶ್ ಖಾನ್, ಹರ್ಷಲ್ ಪಟೇಲ್, ಹಾಗೂ ಅರ್ಷದೀಪ್ ಸಿಂಗ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News