ಯುಎಇಯಿಂದ ವಾಪಸಾದ ಕೇರಳಿಗನಿಗೆ ಮಂಕಿಪಾಕ್ಸ್ ಲಕ್ಷಣಗಳು; ಇಂದು ಸಂಜೆ ವರದಿ ದೊರೆಯುವ ನಿರೀಕ್ಷೆ

Update: 2022-07-14 09:42 GMT
ಸಾಂದರ್ಭಿಕ ಚಿತ್ರ

ತಿರುವನಂತಪುರಂ: ಸಂಯುಕ್ತ ಅರಬ್ ಸಂಸ್ಥಾನದಿಂದ ಮೂರು ದಿನಗಳ ಹಿಂದೆ ಮರಳಿದ್ದ ಕೇರಳದ ವ್ಯಕ್ತಿಯೊಬ್ಬನಲ್ಲಿ ಮಂಕಿಪಾಕ್ಸ್ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು  ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಈತನಿಗೆ ಮಂಕಿಪಾಕ್ಸ್ ಸೋಂಕು ಇರುವುದು ದೃಢಪಟ್ಟಲ್ಲಿ ಇದು ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಲಿದೆ. ಈಗಾಗಲೇ ಮಂಕಿಪಾಕ್ಸ್ ವಿಶ್ವದ ಹಲವು ದೇಶಗಳಲ್ಲಿ ಆತಂಕ ಸೃಷ್ಟಿಸಿದೆ.

"ಮಂಕಿಪಾಕ್ಸ್ ಲಕ್ಷಣಗಳು ಕಾಣಿಸಿಕೊಂಡ ವ್ಯಕ್ತಿಯನ್ನು ವೈದ್ಯರ ನಿಗಾದಲ್ಲಿರಿಸಲಾಗಿದೆ ಹಾಗೂ ಆತನ ಸ್ಯಾಂಪಲ್‍ಗಳನ್ನು ಪುಣೆಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದ್ದು, ಗುರುವಾರ ಸಂಜೆಯೊಳಗೆ ವರದಿ ದೊರೆಯುವ ನಿರೀಕ್ಷೆಯಿದೆ,'' ಎಂದು ಅವರು ಹೇಳಿದ್ದಾರೆ.

"ಮಂಕಿಪಾಕ್ಸ್ ದೃಢಪಟ್ಟ ವ್ಯಕ್ತಿಯೊಬ್ಬನ ಜೊತೆಗೆ ಈತನಿಗೆ ಸಂಪರ್ಕವಿತ್ತು. ಆತನನ್ನು ಕ್ವಾರಂಟೈನ್‍ನಲ್ಲಿರಿಸಲಾಗಿದ್ದು ಹಾಗೂ ಆತನ ಕುಟುಂಬವನ್ನೂ ನಿಗಾದಲ್ಲಿರಿಸಲಾಗಿದೆ,'' ಎಂದು ಸಚಿವೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News