VIDEO- ಸಿ.ಟಿ.ರವಿ ಹುಟ್ಟುಹಬ್ಬಕ್ಕೆ ಹಾಕಿದ್ದ ಬ್ಯಾನರ್ ಹರಿದು ಆಕ್ರೋಶ
Update: 2022-07-18 23:07 IST
ಬೆಂಗಳೂರು, ಜು.18: ಹೈಕೋರ್ಟ್ ಆದೇಶ ಉಲ್ಲಂಘಿಸಿ ಇಲ್ಲಿನ ವಿಧಾನಸೌಧ ಮುಂಭಾಗದಲ್ಲಿಯೇ ಅಳವಡಿಸಿದ್ದ ಬ್ಯಾನರ್ ಅನ್ನು ಹರಿದು ಕಾಂಗ್ರೆಸ್ ನಾಯಕಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಾಯಕ ಸಿ.ಟಿ.ರವಿ ಹುಟ್ಟಿದ ದಿನ ಹಿನ್ನೆಲೆ ಸೋಮವಾರ ಇಲ್ಲಿನ ವಿಧಾನಸೌಧ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಬೃಹತ್ ಬ್ಯಾನರ್ ಅನ್ನು ಕಾಂಗ್ರೆಸ್ ನಾಯಕಿ ಬಿಂದು ಗೌಡ ಹರಿದು ಆಕ್ರೋಶ ವ್ಯಕ್ತಪಡಿಸಿದಲ್ಲದೆ, ಬಿಬಿಎಂಪಿ ಅಧಿಕಾರಿಗಳು ಬ್ಯಾನರ್ ಅಳವಡಿಕೆ ಮಾಡಿರುವವರ ವಿರುದ್ಧ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.