×
Ad

ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಗೆ ಕೇಸರಿ ಶಾಲು ಹಾಕಿದ ಬಿಜೆಪಿ ಶಾಸಕರು!

Update: 2022-07-18 23:49 IST

ಬೆಂಗಳೂರು: ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಮತದಾನ ಮಾಡಿ ವಾಪಸ್ ಬರುತ್ತಿದ್ದಾಗ ವಿಧಾನಸೌಧದಲ್ಲಿ ಬಿಜೆಪಿ ಶಾಸಕರು ಕೇಸರಿ ಶಾಲು ಹಾಕಿ ಸ್ವಾಗತಿಸಿದ ಘಟನೆ ನಡೆಯಿತು. 

ಸೋಮವಾರ ವಿಧಾನಸೌಧದ ಮೊದಲನೆ ಮಹಡಿಯಲ್ಲಿ ಕೊಠಡಿ ಸಂಖ್ಯೆ 106ರಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು.  ಸುರೇಶ್ ಅವರು ಮತದಾನ ಮಾಡಿ ವಾಪಸ್ ಬರುತ್ತಿದ್ದಾಗ ಬಿಜೆಪಿ ಶಾಸಕರಾದ ರಾಜೂಗೌಡ, ಗೂಳಿಹಟ್ಟಿ ಶೇಖರ್, ಎಂ.ಪಿ. ರೇಣುಕಾಚಾರ್ಯ ಮುಖಾಮುಖಿಯಾಗಿದ್ದಾರೆ. 

ತಮ್ಮ ಹೆಗಲ‌ ಮೇಲಿದ್ದ ಕೇಸರಿ ಶಾಲನ್ನು ತೆಗೆದ ಶಾಸಕ ರಾಜೂಗೌಡ ಅವರು ಬೈರತಿ ಸುರೇಶ್ ಅವರ ಹೆಗಲಿಗೆ ಹಾಕಿದ್ದಾರೆ. ತಕ್ಷಣ ಅದನ್ನು ಸುರೇಶ ಅವರು ತೆಗೆದು ವಾಪಸ್ ನೀಡಿದ್ದಾರೆ. 

ಇದನ್ನೂ ಓದಿ... ರಾಷ್ಟ್ರಪತಿ ಚುನಾವಣೆ: ವಿಧಾನಸೌಧದಿಂದ ದಿಲ್ಲಿಗೆ ವಿಮಾನದಲ್ಲಿ ‘ಬ್ಯಾಲೆಟ್ ಬಾಕ್ಸ್' ರವಾನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News