ಬೆಂಗಳೂರು: ದಂಪತಿಗಳ ನಡುವಿನ ಜಗಳದಲ್ಲಿ ಅತ್ತೆ ಬಲಿ
Update: 2022-07-19 18:50 IST
ಬೆಂಗಳೂರು, ಜು.19: ದಂಪತಿ ಜಗಳದಲ್ಲಿ ಅತ್ತೆಯನ್ನು ಕೊಲೆಗೈದಿರುವ ಘಟನೆ ಇಲ್ಲಿನ ಎಚ್‍ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಾರತ್ ಹಳ್ಳಿಯ ಸಂಜಯನಗರ ನಿವಾಸಿ ಸೌಭಾಗ್ಯ ಕೊಲೆಯಾಗಿದ್ದು, ಘಟನೆ ಸಂಬಂಧ ಆರೋಪಿ ನಾಗರಾಜ್ ಎಂಬಾತನನ್ನು ಎಚ್‍ಎಎಲ್ ಪೊಲೀಸರು ಬಂಧಿಸಿದ್ದಾರೆ.
ಕಳೆದ 6 ವರ್ಷದ ಹಿಂದೆ ನಾಗರಾಜ(35) ಮತ್ತು ಭವ್ಯಶ್ರೀ ಮದುವೆಯಾಗಿತ್ತು. ವೃತ್ತಿಯಲ್ಲಿ ಚಾಲಕ ಕೆಲಸ ಮಾಡುತ್ತಿದ್ದ ನಾಗರಾಜ ಮದ್ಯ ಸೇವನೆ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಆಗಾಗ ಮನೆಯಲ್ಲಿ ಗಲಾಟೆ ಆಗುತ್ತಿತ್ತು. ಮೂರು ವರ್ಷಗಳಿಂದ ಸಂಜಯನಗರ ತಾಯಿ ಮನೆಗೆ ಭವ್ಯಶ್ರೀ ಬಂದಿದ್ದಳು ಎಂದು ಹೇಳಲಾಗುತ್ತಿದೆ.
ಜು.12ರಂದು ಆಗಮಿಸಿ ಭವ್ಯಶ್ರೀ ಮನೆ ಮುಂದೆ ಗಲಾಟೆ ಮಾಡಿದ ಆರೋಪಿ ಈ ವೇಳೆ ಅತ್ತೆ ಸೌಭಾಗ್ಯ ಅವರ ಮೇಲೆ ಹಲ್ಲೆ ನಡೆಸಿ ಕೊಲೆಗೈದಿರುವ ಆರೋಪ ಕೇಳಿಬಂದಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.