ಸಫಾಯಿ ಕರ್ಮಚಾರಿಗಳಿಗೆ ಪುನರ್ವಸತಿ ಕಲ್ಪಿಸದಿದ್ದರೆ, ವಿಧಾನಸೌಧ ಮುಂಭಾಗ ಪ್ರತಿಭಟನೆ: ಎಚ್ಚರಿಕೆ

Update: 2022-07-20 18:19 GMT

ಬೆಂಗಳೂರು, ಜು.20: ಸಫಾಯಿ ಕರ್ಮಚಾರಿಗಳ ಬೇಡಿಕೆಗಳನ್ನು ರಾಜ್ಯ ಸರಕಾರವು ನೆರವೇರಿಸದಿದ್ದರೆ, ಮುಂದಿನ ವಾರದಲ್ಲಿ ವಿಧಾನಸೌಧ ಮುಂಭಾಗ 5,000 ಕರ್ಮಚಾರಿಗಳಿಂದ ಪ್ರತಿಭಟನೆ ಮಾಡಲಾಗುತ್ತದೆ ಎಂದು ಸಫಾಯಿ ಕರ್ಮಚಾರಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಸಂಚಾಲಕ ಡಿ.ಬಾಬುಲಾಲ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮ್ಯಾನುವಲ್ ಸ್ಕ್ಯಾವೆಂಜರ್ಸ್ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಹಾಗೂ ಎಸ್.ಆರ್.ಎಂ.ಎಸ್. ಕಾಯ್ದೆ 2013ರ ಪ್ರಕಾರ ಪುನರ್ವಸತಿ ನೀಡಬೇಕು. ಆದರೆ ಸರಕಾರವು ಯಾವುದೇ ಪುನರ್ವಸತಿಯನ್ನು ಕಲ್ಪಿಸದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಸಫಾಯಿ ಕರ್ಮಚಾರಿಗಳ ಸಮಸ್ಯೆಗಳನ್ನು ನೆರವೇರಿಸುವಂತೆ ಹಲವಾರು ಮನವಿ ಪತ್ರಗಳನ್ನು ನೀಡಿದರೂ, ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸರಕಾರವು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದೆ. ಇದರಿಂದ ಸಾವಿರಾರು ಕರ್ಮಚಾರಿಗಳ ಜೀವನ ಅತಂತ್ರವಾಗಿದೆ. ಹಾಗಾಗಿ ಸರಕಾರವು ಕೂಡಲೇ ಅವರಿಗೆ ಪುನರ್ವಸತಿಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News