×
Ad

ಸುಳ್ಯ ಯುವಕನ ಹತ್ಯೆ ಖಂಡನೀಯ: ಎಸ್ಸೆಸ್ಸೆಫ್

Update: 2022-07-21 23:14 IST

ಮಂಗಳೂರು : ಕ್ಷುಲ್ಲಕ ವಿಚಾರಕ್ಕೆ ನಡೆದಿದ್ದ ಜಗಳಕ್ಕೆ ಸಂಬಂಧಪಟ್ಟು  ಇತ್ಯರ್ಥಪಡಿಸುವುದಾಗಿ ಮಸೂದ್ ಎಂಬ ಯುವಕನನ್ನು  ಕರೆಸಿ ಗೂಂಡಾಗಳು ಹತ್ಯೆ ನಡೆಸಿರುವುದನ್ನು   ಎಸ್ಸೆಸ್ಸೆಫ್ ಕರ್ನಾಟಕ  ರಾಜ್ಯ ಸಮಿತಿ ಖಂಡಿಸಿದೆ . ಹಂತಕರ ವಿರುದ್ಧ ಸಂಬಂಧಪಟ್ಟ ಇಲಾಖೆ ಕಠಿಣ ಕೈಗೊಳ್ಳಬೇಕು.   ಕೋಮು ವೈಷಮ್ಯದಿಂದ ನಡೆದಿರುವ ಈ ಕೊಲೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು.

ಇತ್ತೀಚೆಗಿನ ದಿನಗಳಲ್ಲಿ ರಾಜ್ಯದಲ್ಲಿ ಕೊಲೆ ಪ್ರಕರಣಗಳು ದಿನಕ್ಕೊಂದರಂತೆ ನಡೆಯುತ್ತಿದ್ದು, ನಾಗರಿಕರು ಭಯಭೀತರಾಗಿದ್ದಾರೆ. ರಾಜ್ಯಸರಕಾರವು ಎಚ್ಚೆತ್ತುಕೊಂಡು ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು  ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸ‌ಅದಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾ‌ಈಲ್ ಮಾಸ್ಟರ್ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News