ಕೇರಳದಲ್ಲಿ ಆಫ್ರಿಕನ್‌ ಹಂದಿಜ್ವರ ಪತ್ತೆ: ಫಲಿತಾಂಶದ ಬಳಿಕ ಹಂದಿಗಳನ್ನು ಕೊಲ್ಲಲು ನಿರ್ಧಾರ

Update: 2022-07-22 15:28 GMT

ತಿರುವನಂತಪುರ,ಜು.22: ಕೇರಳದ ವಯನಾಡ್ ಜಿಲ್ಲೆಯ ಮಾನಂತವಾಡಿಯ ಎರಡು ಹಂದಿ ಫಾರ್ಮ್ ಗಳಲ್ಲಿ ಆಫ್ರಿಕನ್ ಹಂದಿಜ್ವರವು ಪತ್ತೆಯಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಭೋಪಾಲನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಎನಿಮಲ್ ಡಿಸೀಸಸ್ನಲ್ಲಿ ಸ್ಯಾಂಪಲ್ ಗಳ ಪರೀಕ್ಷೆಯ ಬಳಿಕ ಜಿಲ್ಲೆಯಲ್ಲಿನ ಎರಡು ಫಾರ್ಮ್ ಗಳಲ್ಲಿಯ ಹಂದಿಗಳಲ್ಲಿ ರೋಗವು ದೃಢಪಟ್ಟಿದೆ.

ಎರಡು ಫಾರ್ಮ್‌ಗಳ ಪೈಕಿ ಒಂದರಲ್ಲಿ ಹಂದಿಗಳು ಸಾಮೂಹಿಕ ಸಾವನ್ನಪ್ಪಿದ ಬಳಿಕ ಸ್ಯಾಂಪಲ್ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷೆ ವರದಿಯು ಸೋಂಕನ್ನು ದೃಢಪಡಿಸಿದೆ. ಸದ್ರಿ ಫಾರ್ಮ್ನಲ್ಲಿಯ 300 ಹಂದಿಗಳನ್ನು ಕೊಲ್ಲುವಂತೆ ನಿರ್ದೇಶ ನೀಡಲಾಗಿದೆ ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಯೋರ್ವರು ತಿಳಿಸಿದರು.
ರೋಗವು ಹರಡುವುದನ್ನು ತಡೆಯಲು ಇಲಾಖೆಯು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.

ಬಿಹಾರ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ಆಫ್ರಿಕನ್ ಹಂದಿಜ್ವರ ವರದಿಯಾಗಿದೆ ಎಂದು ಕೇಂದ್ರವು ಈ ತಿಂಗಳ ಆರಂಭದಲ್ಲಿ ಎಚ್ಚರಿಕೆ ನೀಡಿದ ಬಳಿಕ ರಾಜ್ಯವು ಜೈವಿಕ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಿತ್ತು. ಆಫ್ರಿಕನ್ ಹಂದಿಜ್ವರವು ದೇಶಿಯ ಹಂದಿಗಳನ್ನು ಕಾಡುವ ತೀವ್ರ ಸಾಂಕ್ರಾಮಿಕ ಮತ್ತು ಮಾರಣಾಂತಿಕ ರೋಗವಾಗಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News