ಸಿಎ ಪರೀಕ್ಷೆ: ಉಜಿರೆಯ ಶಫೀಕ ಫಾತಿಮಾ ಉತ್ತೀರ್ಣ

Update: 2022-07-24 08:34 GMT

ಮಂಗಳೂರು, ಜು.24: ಚಾರ್ಟರ್ಡ್‌ ಅಕೌಂಟ್ಸ್‌ (ಸಿಎ) ಪರೀಕ್ಷೆಯಲ್ಲಿ ಉಜಿರೆಯ ಶಫೀಕ ಫಾತಿಮಾ ಉತ್ತೀರ್ಣರಾಗಿದ್ದಾರೆ

ಉಜಿರೆ ನಿವಾಸಿ, ದಿವಂಗತ ಇಸ್ಮಾಯೀಲ್ ಹಾಗೂ ತಾಹಸೀನ್ ದಂಪತಿಯ ಪುತ್ರಿಯಾಗಿರುವ ಇವರು ಸಿ.ಕೆ.ಫಹಾದ್ ರ ಪತ್ನಿ.

ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಉಜಿರೆಯ ಎಸ್.ಡಿ.ಎಂ. ಪಿಯು ಕಾಲೇಜಿನಲ್ಲಿ ಪಿಯುಸಿ ಮಾಡಿದ್ದಾರೆ. ಬಳಿಕ ಮಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಶೇಖ್ ಅಬ್ದುಲ್ಲಾ ತರಬೇತಿಯಲ್ಲಿ ಸಿಎ ಪರೀಕ್ಷೆ ಎದುರಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News