×
Ad

ರಿಸೈಕಲ್ ದಿ ಲಾಂಜ್‌ನಲ್ಲಿ ಗೂಂಡಾಗಿರಿಗೆ ಬಜರಂಗದಳವನ್ನು ಸರಕಾರವೇ ಕಳುಹಿಸಿದ್ದೇ?: ಅಕ್ಷಿತ್ ಸುವರ್ಣ ಪ್ರಶ್ನೆ

Update: 2022-07-26 13:12 IST

ಮಂಗಳೂರು, ಜು. 26: ಹೊಟೇಲ್ ಗೆ ಹೋಗಿ ಗ್ರಾಹಕರನ್ನು ಹೊರಗೆ ಕಳುಹಿಸಿ ಗೂಂಡಾಗಿರಿ ಪ್ರದರ್ಶಿಸಲು  ಆ ಸಂಘಟನೆಗೆ ಅಧಿಕಾರ ನೀಡಿದವರು ಯಾರು? ಬಿಜೆಪಿ ಸರಕಾರವೇ ಇವರನ್ನು ಕಳುಹಿಸಿದ್ದೇ ಎಂದು ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಪ್ರಶ್ನಿಸಿದ್ದಾರೆ‌.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು 2009ರಲ್ಲಿ ಪಬ್ ದಾಳಿ ಆದಾಗಲೂ ರಾಜ್ಯದಲ್ಲಿ ಬಿಜೆಪಿ ಸರಕಾರವಿತ್ತು. ಈಗ ಮತ್ತೆ ಬಿಜೆಪಿ ಸರಕಾರ ಇರುವಾಗ ಚುನಾವಣೆ ಸಮೀಪಿಸುತ್ತಿರುವಾಗ ಈ ಕೃತ್ಯ ನಡೆದಿದೆ ಎಂದರು.

ಹಿಂದೆಯೂ ಇಂತಹ ಮತೀಯ ಸಂಘಟನೆಗಳ ಕೃತ್ಯದಿಂದ ಜಿಲ್ಲೆಗೆ ಕೆಟ್ಟ ಹೆಸರು ಬಂದಿದೆ. ಇಲ್ಲಿ ದೇಶದ ವಿವಿಧ ಭಾಗಗಳ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬರುತ್ತಾರೆ. ಇಂತಹ ಘಟನೆಗಳು ಜಿಲ್ಲೆಯ ಘನತೆಗೆ ಕುಂದು ತರುತ್ತದೆ ಎಂದವರು ಹೇಳಿದರು.

ನಿನ್ನೆ ನಡೆದ ಕೃತ್ಯದಲ್ಲಿ ಭಾಗವಹಿಸಿದವರನ್ನು ಬಂಧಿಸಬೇಕು. ಅವರ ಹಿನ್ನೆಲೆ ಪರಿಶೀಲಿಸಬೇಕು. ಪೊಲೀಸ್ ಆಯುಕ್ತರು ಸೂಕ್ತ ಕ್ರಮ ವಹಿಸಬೇಕು. ಸರಕಾರ  ಇಂತಹ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಫೈಸಲ್ ರಹ್ಮಾನ್, ಹಿತೇಶ್ ರೈ, ಸುಮಿತ್ ಸುವರ್ಣ, ಲತೀಶ್ ಕರ್ಕೇರ, ರಶೀದ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News