ಬೆಂಗಳೂರು; 10 ವರ್ಷಗಳಿಂದ ಯುವತಿಗೆ ಲೈಂಗಿಕ ಕಿರುಕುಳ ಆರೋಪ: ಎಫ್‍ಐಆರ್ ದಾಖಲು

Update: 2022-07-27 12:55 GMT

ಬೆಂಗಳೂರು, ಜು.27: 10 ವರ್ಷಗಳಿಂದ ನಿರಂತರವಾಗಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿ ಯುವತಿ ನೀಡಿದ ದೂರಿನ ಅನ್ವಯ ಇಲ್ಲಿನ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಪೋಸ್ಕೊ ಕಾಯ್ದೆಯಡಿ 8 ಮಂದಿ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿಗೆ 6 ವರ್ಷವಾಗಿದ್ದಾಗ ತಂದೆ ಪಾದ್ರಿಯಾಗಿ ಕೆಲಸ ಮಾಡುತ್ತಿದ್ದು ಕೆಲಸ ನಿಮಿತ್ತ ಸ್ನೇಹಿತರೊಬ್ಬರ ಮನೆಗೆ ಬಿಟ್ಟಿದ್ದರು. 10 ವರ್ಷವಾದಾಗ ಈ ವೇಳೆ ಸ್ನೇಹಿತನ ಮಗ ಬಾಲಕಿಗೆ ದೌರ್ಜನ್ಯ ಎಸಗುತ್ತಿದ್ದ. ಬಳಿಕ ಶಾಲಾ ಶಿಕ್ಷಕನಿಗೆ ತಿಳಿಸಿದ್ದೆ, ಈ ವಿಷಯ ಅರಿತ ಶಿಕ್ಷಕ ಈ ಬಗ್ಗೆ ಎಲ್ಲರಿಗೂ ತಿಳಿಸುವೆ ಎಂದು ಬೆದರಿಕೆವೂಡ್ಡಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಎರಡು ವರ್ಷಗಳಿಂದ ಆತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಜೊತೆಗೆ ತನ್ನ ಸ್ನೇಹಿತೆ ಮೇಲೆಯೂ ಇದೇರೀತಿ ದೌರ್ಜನ್ಯ ಮೆರೆದಿದ್ದಾನೆ. ಈ ವಿಷಯ ತಿಳಿದರೂ ಇನ್ನೂ ಆರು ಮಂದಿ ಆರೋಪಿಗಳು ಕೃತ್ಯವೆಸಗಲು ಸಹಕರಿಸಿದ್ದರು. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಘಟನೆ ಸಂಬಂಧ ಎಂಟು ಮಂದಿ ಆರೋಪಿಗಳ ವಿರುದ್ದ ಪೂರ್ವ ವಿಭಾಗದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News