ರೋಟರಿಯ ರಕ್ತದಾನ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ; 100 ಯುನಿಟ್ ರಕ್ತ ಸಂಗ್ರಹ
ಬೆಂಗಳೂರು: ʼರಕ್ತದಾನ ಮಾಡಿ, ಇನ್ನೊಬ್ಬರ ಉಳಿವಿಗೆ ಕಾರಣರಾಗಿʼ ಎಂಬ ಉದಾತ್ತ ಘೋಷಣೆಯೊಂದಿಗೆ ಜು.26ರಂದು ಬೆಂಗಳೂರಿನ ವಿವಿ ಪುರಂನ BMS ಕಾಲೇಜ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ರಕ್ತದಾನ ಅಭಿಯಾನವನ್ನು ಆಯೋಜಿಸಲಾಯಿತು.
ರೋಟರಿ ಬೆಂಗಳೂರಿನೊಂದಿಗೆ ಈ ಸಮಾಜಸೇವಾ ಯೋಜನೆಗೆ ಸೌತ್‌ವೆಸ್ಟ್ (RBSW), ರೋಟರಿ ಬೆಂಗಳೂರು ಸೌತ್‌ವೆಸ್ಟ್ ಸಫೈರ್ ಮತ್ತು ಇನ್ನರ್ ವೀಲ್ ಕ್ಲಬ್ ಆಫ್ ಬೆಂಗಳೂರು ಸೌತ್‌ವೆಸ್ಟ್ (IWCBSW), BMST ಮತ್ತು Rotaract BMS ಬೆಂಬಲ ನೀಡಿದ್ದು, TTK ಬ್ಲಡ್ ಬ್ಯಾಂಕ್ ನ ಸಹಕಾರದೊಂದಿಗೆ 100 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ.
ಮುಖ್ಯ ಅತಿಥಿಯಾಗಿ ಕನ್ನಡ ಮಹಿಳಾ ರಾಪರ್ ರಮ್ಯಾ ಶ್ರೀಧರ್ (ರಾಮ್ಸಿ) ಆಗಮಿಸಿದ್ದರು. ಈ ಸಂದರ್ಭದಲ್ಲಿ RBSW ಅಧ್ಯಕ್ಷ ಸಂದೀಪ್ ರಾಜ, RBSW ಕಾರ್ಯದರ್ಶಿ ರೋಟರಿಯನ್ ಸುಬೋಧ್ ಖಂಡೇಕರ್, IWCBSW ಅಧ್ಯಕ್ಷೆ ಜ್ಯೋತಿ ವೆಂಕಟರಾಮ್, ಮತ್ತು ಸಫೈರ್ ಕ್ಲಬ್ ಕಾರ್ಯದರ್ಶಿ ಹಂಸ, ಸಮುದಾಯ ಸೇವಾ ನಿರ್ದೇಶಕ ರೋಟರಿಯನ್ ಸತೀಶ್ ಗುಂಡಪ್ಪ, ಪಿಡಿಜಿ ಡಾ. ಸಮೀರ್ ಹರಿಣಿ, ಪಬ್ಲಿಕ್ ಇಮೇಜ್ ಡೈರೆಕ್ಟರ್ ಆರ್ಟಿಎನ್. ರೂಪಾ ಹರಿಯಾನಿ ಮತ್ತು ಅಸೋಸಿಯೇಶನ್ ಕೌನ್ಸಿಲ್ ಸದಸ್ಯೆ ವೀಣಾ ನಿರಂಜನ್ ಸೇರಿದಂತೆ ಅನೇಕ ರೋಟರಿಯನ್ನರು ಮತ್ತು ಐಡಬ್ಲ್ಯೂ ಸದಸ್ಯರು ಉಪಸ್ಥಿತರಿದ್ದರು.