ಅದ್ರಿತ್ ಫೌಂಡೇಶನ್ ವತಿಯಿಂದ ಅಂಗಾಂಗ ದಾನ ಬಗ್ಗೆ ನಾಗರೀಕರಿಗೆ ಜಾಗೃತಿ

Update: 2022-07-29 16:55 GMT

ಬೆಂಗಳೂರು, ಜು.29- ಪ್ರತಿಯೊಬ್ಬರು ಅಂಗಾಂಗ ದಾನಕ್ಕೆ ಮುಂದಾರೆ, ಆರೋಗ್ಯ ಸಮಾಜವನ್ನು ರೂಪಿಸಬಹುದು ಎಂದು ಅದ್ರಿತ್ ಫೌಂಡೇಶನ್ ವತಿಯಿಂದ ನಾಗರೀಕರಿಗೆ ಜಾಗೃತಿ ಮೂಡಿಸಲಾಯಿತು.

ನಗರದ ರಾಜರಾಜೇಶ್ವರಿ ನಗರದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮ ಮೂಲಕ ಫೌಂಡೇಶನ್ ಸದಸ್ಯರು ಜಾಗೃತಿ ಮೂಡಿಸಿ, ಅಂಗಾಂಗ ದಾನ ಮಾಡಲಾಗುವುದೆಂದು ನಾಗರೀಕರಲ್ಲಿ ಪ್ರತಿಜ್ಞೆ ಮಾಡಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ–ಅಂಶಗಳ ಪ್ರಕಾರ, ಶೇ.0.1ರಷ್ಟು ಭಾರತೀಯರು ಮಾತ್ರ ಅಂಗಾಂಗ ದಾನ ಮಾಡುತ್ತಿದ್ದಾರೆ. ಜನರಲ್ಲಿ ಅರಿವಿನ ಕೊರತೆ, ಧಾರ್ಮಿಕ ನಂಬಿಕೆ ಹಾಗೂ ಮೂಢ ನಂಬಿಕೆಗಳಿಂದ ಜನರು ಅಂಗಾಂಗ ದಾನಕ್ಕೆ ಮುಂದೆ ಬರುತ್ತಿಲ್ಲ. ಇದನ್ನು ನಿವಾರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರತಿ ವರ್ಷ 1.5 ಲಕ್ಷದಿಂದ 2 ಲಕ್ಷ ಕಿಡ್ನಿಗಳ ಕಸಿ ಅಗತ್ಯವಿದೆ. ಆದರೆ, 8 ರಿಂದ 10 ಸಾವಿರ ಕಿಡ್ನಿ ಕಸಿ ಮಾತ್ರ ಆಗುತ್ತಿವೆ. 40 ರಿಂದ 50 ಸಾವಿರ ಲಿವರ್ ಕಸಿ ಅಗತ್ಯವಿದ್ದು, 1,700 ರಿಂದ 1800 ಮಾತ್ರ ಸಾಧ್ಯವಾಗುತ್ತಿದೆ. 2 ಲಕ್ಷ ಹೃದಯ ಕಸಿ ಅವಶ್ಯಕತೆ ಇದ್ದು, ಕೇವಲ 3,500 ಹೃದಯ ಕಸಿ ಸಾಧ್ಯವಾಗಿದೆ ಎಂದು ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಅದ್ರಿತ್ ಫೌಂಡೇಶನ್‌ನ ಸಂಸ್ಥಾಪಕಿ ಶರ್ಮಿಳಾ ಶೇಷಾದ್ರಿ, ಸಹ ನಿರ್ದೇಶಕ ಗಣೇಶ್ ಕುಮಾರ್, ಪದ್ಮಜಾ ರಾವ್, ಅತಿಥಿ ಉಪನ್ಯಾಸಕ ಎಂ.ಕೆ.ಕೃಷ್ಣ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News