ಸೋನಿ ಗೋನ್ಸಾಲ್ವಿಸ್

Update: 2022-07-30 10:19 GMT

ಪುತ್ತೂರು: ಪತ್ರಕರ್ತ, ಪಿಸಿಎನ್ ಕೇಬಲ್ ಟಿವಿ ವಾಹಿನಿಯ ವರದಿಗಾರ ನಗರದ ಉರ್ಲಾಂಡಿ ನಿವಾಸಿ ಸೋನಿ ಗೋನ್ಸಾಲ್ವಿಸ್(55) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.

ಅವರು ಕಳೆದ ಹಲವು ವರ್ಷಗಳಿಂದ ಪುತ್ತೂರು ಕೇಬಲ್ ಟಿವಿ (ಸಿಟಿವಿ) ವರದಿಗಾರರಾಗಿದ್ದರು. ಪುತ್ತೂರು ತಾಲೂಕು  ಪತ್ರಕರ್ತರ ಸಂಘದ ಮಾಜಿ ಸದಸ್ಯ, ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಮಾಜಿ ಸದಸ್ಯರಾಗಿದ್ದಾರೆ. 

ಅನಾರೋಗ್ಯದಿಂದ ಬಳಲುತಿದ್ದ ಸೋನಿ ಗೋನ್ಸಾಲ್ವಿಸ್  ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತರಲಾಗಿತ್ತು. ಶನಿವಾರ  ನಸುಕಿನ ಜಾವ ನಿಧನರಾದರು. 

ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ