×
Ad

ಕಣ್ಣೂರು, ಅಡ್ಯಾರು, ಪಾಂಡೇಶ್ವರ, ಎಮ್ಮೆಕೆರೆಯಲ್ಲಿ ಕೃತಕ ನೆರೆ; ಐವನ್ ಡಿಸೋಜ ಭೇಟಿ, ಪರಿಶೀಲನೆ

Update: 2022-07-30 16:24 IST

ಮಂಗಳೂರು : ನಗರದ ಅಡ್ಯಾರು ಮತ್ತು ಕಣ್ಣೂರು ಪ್ರದೇಶಗಳಲ್ಲಿ ಅತಿಯಾಗಿ ಸುರಿದ ಮಳೆಯಿಂದ ನೀರು ಆಯ್ದು ಹೋಗುವ ಚರಂಡಿಗಳು, ರಾಷ್ಟ್ರೀಯ ಹೆದ್ದಾರಿಯವರು  ಬಂದ್ ಮಾಡಿದ ಕಾರಣಕ್ಕಾಗಿ, ಆ ನೀರು ಅನೇಕ ಮನೆಗಳಿಗೆ ನುಗ್ಗಿ, ಆ ಪ್ರದೇಶದಲ್ಲಿರುವ ಮನೆ ಮತ್ತು ಕೃಷಿಗಳು ನಾಶ ಉಂಟಾದುದರನ್ನು ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಐವನ್ ಡಿ ಸೋಜರವರು ಪರಿಶೀಲನೆ ನಡೆಸಿದರು ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಮತ್ತು ಜಿಲ್ಲಾಧಿಕಾರಿಯವರಿಗೆ ಕೂಡಲೇ ಸರಿಪಡಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ  ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಅಬಿಬುಲ್ಲ ಕಣ್ಣೂರು, ವಾರ್ಡ್ ಅಧ್ಯಕ್ಷ ಇ.ಕೆ.ರಫೀಕ್, ಐಮೋನು, ಅಬ್ದುಲ್ ಖಾದರ್, ಯಾಕೂಬ್, ಇಬ್ರಾಹಿಂ, ಪುತ್ತ, ಕಬೀರ್ ಕುಂಡಾಲ, ರಿಯಾಜ್ ಕುಂಡಾಲ, ನಝೀರ್ ಹಾಗೂ ಇತರ ಸ್ಥಳೀಯರು ಉಪಸ್ಥಿತರಿದ್ದರು.

ಮಂಗಳೂರು ನಗರಾದ್ಯದಂತ ಅತೀಯಾಗಿ ಸುರಿದ ಮಳೆಯಿಂದ ನಗರದ ಶಿವನಗರ, ಪಾಂಡೇಶ್ವರ, ಎಮ್ಮೆಕೆರೆ ಮುಂತಾದ ಕಡೆಗಳಲ್ಲಿ ಅತಿಯಾದ ಮಳೆಯಿಂದ ನೆರೆಯಾಗಿ, ಸುಮಾರು 40ಕ್ಕೂ ಹೆಚ್ಚು ಮನೆಗಳ ಗೃಹಪಯೋಗ ವಸ್ತುಗಳು ನಾಶವಾಗಿದ್ದು,  ಸ್ಥಳಕ್ಕೆ ಭೇಟಿ ನೀಡಿದ ಐವನ್ ಡಿಸೋಜ ಇವರು ಪರಿಹಾರ ಒದಗಿಸಿಕೊಡುವಲ್ಲಿ ಮತ್ತು ಬೇರೆ ಕಡೆ ನೀರು ತಿರುಗಿಸಿ ಕೊಡುವಲ್ಲಿ ಸಹಕರಿಸಿದರು.

ಈ ಸಂದರ್ಭದಲ್ಲಿ ನಗರ ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ ಸ್ಥಳೀಯ ಇಂಜಿನಿಯರ್ ರೊಂದಿಗೆ ಮಾತನಾಡಿ, ತಹಶೀಲ್ದಾರ ಮೂಲಕ ಕೂಡಲೇ ಅಂದಾಜು ವೆಚ್ಚ ತಯಾರಿಸಿ, ಪರಿಹಾರ ಒದಗಿಸಿಕೊಡಬೇಕೆಂದು ಜಿಲ್ಲಾಧಿಕಾರಿಯವರಿಗೆ ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಸ್ಥಳೀಯ ನಾಯಕರಾದ ರಮಾನಂದ ಪೂಜಾರಿ, ಸದಾಶಿವ ಕುಲಾಲ್, ರುಕ್ಮಯ, ಶಿವಣ್ಣ, ದಿನೇಶ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News