×
Ad

ಗೃಹ ಸಚಿವರ ನಿವಾಸಕ್ಕೆ ಎಬಿವಿಪಿ ಮುತ್ತಿಗೆ ಪ್ರಕರಣ: ಪಿಎಸ್ಸೈ ಸೇರಿ ಇಬ್ಬರ ಅಮಾನತು

Update: 2022-07-30 19:42 IST

ಬೆಂಗಳೂರು, ಜು.30: ಎಬಿವಿಪಿ ಕಾರ್ಯಕರ್ತರುಗೃಹ ಸಚಿವ ಆರಗ ಜ್ಞಾನೇಂದ್ರ ಮನೆಗೆ ಮುತ್ತಿಗೆ ಹಾಕಿದ್ದ ಪ್ರಕರಣ ಸಂಬಂಧ ಪಿಎಸ್ಸೈ ಸೇರಿದಂತೆ ಇಬ್ಬರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. 

ಜೆ.ಸಿ.ನಗರ ಪೊಲೀಸ್ ಠಾಣೆಯ ಪಿಎಸ್ಸೈ  ರಾಜೇಸಾಬ್ ಹಾಗೂ ಹೆಡ್ ಕಾನ್‍ಸ್ಟೆಬಲ್ ಶ್ರೀನಿವಾಸ್ ಮೂರ್ತಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಶನಿವಾರ ಬೆಳಿಗ್ಗೆ ಜಯಮಹಲ್ ಬಳಿಯ ಆರಗ ಜ್ಞಾನೇಂದ್ರ ಅವರ ಸರಕಾರಿ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ತ್ವರಿತ ಕ್ರಮ ಕೈಗೊಳ್ಳಬೇಕಾದ ಕರ್ತವ್ಯಲೋಪ ಎಸಗಿದ್ದ ಆರೋಪ ಹಿನ್ನೆಲೆ ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ, ಇಬ್ಬರನ್ನೂ ಅಮಾನತು ಮಾಡಿದ್ದಾರೆ.

ಮತ್ತೊಂದೆಡೆ ಜೆ.ಸಿ.ನಗರ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ವರ್ಗಾವಣೆ ಆಗಿದ್ದು, ಸದ್ಯ ಈ ಹುದ್ದೆ ಖಾಲಿ ಇದೆ. ಪಿಎಸ್ಸೈ ರಾಜೇಸಾಬ್ ಅವರಿಗೆ ಪ್ರಭಾರಿಯಾಗಿ ಠಾಣಾಧಿಕಾರಿ ಜವಾಬ್ದಾರಿ ನೀಡಲಾಗಿತ್ತು. ಆದರೆ, ಇವರು ತ್ವರಿತವಾಗಿ ಸ್ಥಳಕ್ಕೆ ಹೋಗದಿರುವುದರಿಂದ ಪ್ರತಿಭಟನೆ ತೀವ್ರ ರೂಪ ಪಡೆಯಿತು ಎನ್ನುವ ಮಾತುಗಳು ಕೇಳಿಬಂದಿದೆ.

ಮೊಕದ್ದಮೆ: ಗೃಹ ಸಚಿವರ ಸರಕಾರಿ ನಿವಾಸಕ್ಕೆ  ಮುತ್ತಿಗೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಬಿವಿಪಿ ಕಾರ್ಯಕರ್ತರ ವಿರುದ್ದ ಎಫ್‍ಐಆರ್ ದಾಖಲಾಗಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 30 ಜನರ ವಿರುದ್ಧ ಜೆ.ಸಿ.ನಗರ ಪೆÇಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 448 ( ಮನೆಗೆ ಅತಿಕ್ರಮ ಪ್ರವೇಶ), 143 (ಕಾನೂನು ಬಾಹಿರ ಗುಂಪುಗಾರಿಕೆ)147 (ಕಾನೂನು ಉಲ್ಲಂಘಿಸಿ ಪ್ರತಿಭಟನೆ)149 (ಗುಂಪುಗೂಡಿ ಕಾನೂನು ಬಾಹಿರ ಪ್ರತಿಭಟನೆ) ಅಡಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News