ಉಡುಪಿ: ದಿನದಲ್ಲಿ 15 ಮಂದಿಯಲ್ಲಿ ಕೋವಿಡ್ ಸೋಂಕು

Update: 2022-07-30 17:15 GMT
ಸಾಂದರ್ಭಿಕ ಚಿತ್ರ

ಉಡುಪಿ, ಜು.30: ಶನಿವಾರ ಜಿಲ್ಲೆಯ 15 ಮಂದಿ ಕೋವಿಡ್‌ಗೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ ಇಬ್ಬರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಸದ್ಯ 37 ಮಂದಿ ಕೋವಿಡ್‌ಗೆ ಚಿಕಿತ್ಸೆಯಲ್ಲಿದ್ದಾರೆ.

ಇಂದು ಪರೀಕ್ಷೆಗೊಳಗಾದ 526 ಮಂದಿಯಲ್ಲಿ 15 ಸೋಂಕು ಕಂಡುಬಂದಿದ್ದು, ಇವರಲ್ಲಿ ಏಳು ಮಂದಿ ಪುರುಷರಾದರೆ ಎಂಟು ಮಂದಿ ಮಹಿಳೆಯರು. ಶನಿವಾರ ಉಡುಪಿ ತಾಲೂಕಿನ ಒಂಭತ್ತು ಮಂದಿಯಲ್ಲಿ, ಕುಂದಾಪುರದ ನಾಲ್ವರು ಹಾಗೂ ಕಾರ್ಕಳ ತಾಲೂಕಿನ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ 14 ಮಂದಿ ತಮ್ಮ ತಮ್ಮ ಮನೆಗಳಲ್ಲಿದ್ದು ಚಿಕಿತ್ಸೆ ಪಡೆಯುತಿದ್ದರೆ, ಒಬ್ಬರು ಆಸ್ಪತ್ರೆಗೆ ಸೇರಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಐವರು ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದು, ಇವರಲ್ಲಿ ಮೂವರು ಐಸಿಯುನಲ್ಲಿದ್ದಾರೆ.

ಇಂದು ಉಡುಪಿ ತಾಲೂಕಿನ 222, ಕುಂದಾಪುರ ತಾಲೂಕಿನ 205 ಹಾಗೂ ಕಾರ್ಕಳ ತಾಲೂಕಿನ 99 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಜಿಲ್ಲೆಯಲ್ಲಿ ಇಂದು 91 ಮಂದಿಗೆ ಮೊದಲ ಡೋಸ್, 572 ಮಂದಿಗೆ ಎರಡನೇ ಡೋಸ್ ಹಾಗೂ 2992 ಮಂದಿಗೆ ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News