ಮಂಗಳೂರು : ರೈಲು ಢಿಕ್ಕಿ; ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೃತ್ಯು
Update: 2022-07-31 23:57 IST
ಮಂಗಳೂರು, ಜು.31: ನಗರದ ಎಕ್ಕೂರು ಬ್ರಿಡ್ಜ್ ಬಳಿ ರೈಲು ಢಿಕ್ಕಿ ಹೊಡೆದ ಪರಿಣಾಮ ಕಾಸರಗೋಡಿನ ಪ್ರವೀಣ್ ಮೊಂತೆರೊ (41) ಎಂಬವರು ಮೃತಪಟ್ಟ ಘಟನೆ ರವಿವಾರ ನಡೆದಿದೆ.
ಪ್ರವೀಣ್ ಮೊಂತೆರೋ ಕಿವಿಗೆ ಇಯರ್ ಪೋನ್ ಹಾಕಿಕೊಂಡು ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ರೈಲು ಢಿಕ್ಕಿ ಹೊಡೆದಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.