ಮಂಕಿಪಾಕ್ಸ್ ನಿರ್ವಹಣೆಗೆ ಮಾರ್ಗಸೂಚಿ ಪ್ರಕಟಿಸಿದ ಬಿಬಿಎಂಪಿ

Update: 2022-08-01 17:12 GMT
ಸಾಂದರ್ಭಿಕ ಚಿತ್ರ (PTI)

ಬೆಂಗಳೂರು, ಆ.1: ಮಂಕಿಪಾಕ್ಸ್ ಸೋಂಕು ದೃಢಪಟ್ಟ ವ್ಯಕ್ತಿಯನ್ನು 21 ದಿನಗಳ ಕಾಲ ಅಥವಾ ಸಂಪೂರ್ಣವಾಗಿ ಗುಣವಾಗುವವರೆಗೂ ಪ್ರತ್ಯೇಕವಾಗಿರಿಸುವಂತೆ ಬಿಬಿಎಂಪಿ ಮಂಕಿಪಾಕ್ಸ್ ಮಾರ್ಗಸೂಚಿಯನ್ನು ಸೋಮವಾರ ಪ್ರಕಟಿಸಿದೆ.

ನಗರಕ್ಕೆ ಬರುವ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ಹೆಲ್ತ್ ಸ್ಕ್ರೀನಿಂಗ್ ಅಳವಡಿಸಬೇಕು. ಸ್ಕ್ರೀನಿಂಗ್‍ನಲ್ಲಿ ಮತ್ತು ಟೆಸ್ಟ್‍ನಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದರೆ, ಅವರಿಗೆ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಬೇಕು. 

ಆಸ್ವತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಮಂಕಿಪಾಕ್ಸ್‍ನ ಲಕ್ಷಣ ಮತ್ತು ಗುಣಪಡಿಸುವ ಬಗ್ಗೆ ಸಿಬ್ಬಂದಿಗೆ ಸೂಚಿಸಬೇಕು. ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚುವ, ಗುಣಪಡಿಸುವ, ನಿರ್ವಹಣೆಯ ಬಗ್ಗೆ ತರಬೇತಿ ನೀಡಬೇಕು. ಎಲ್ಲಾ ಮಂಕಿಪಾಕ್ಸ್ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಬೇಕು. 

ಪಾಲಿಕೆ ಎಂಟು ವಲಯದ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಶಂಕಿತ ಸೋಂಕಿತರನ್ನು ಪ್ರತಿನಿತ್ಯ ಪಟ್ಟಿ ಮಾಡಿ, ಅವರ ಸ್ಯಾಂಪಲ್‍ಗಳನ್ನು ಟೆಸ್ಟ್‍ಗೆ ಕಳುಹಿಸಬೇಕು. ಸೋಂಕು ದೃಢಪಟ್ಟರೆ, ಅವರ ಸಂಪರ್ಕಿತರನ್ನು ಟ್ರ್ಯಾಕ್ ಮಾಡಬೇಕು. ಪ್ರತಿನಿತ್ಯದ ಕೇಸ್‍ಗಳ ಅಂಕಿ-ಅಂಶಗಳನ್ನು ಕಲೆ ಹಾಕಬೇಕು ಎಂದು ಬಿಬಿಎಂಪಿ ವ್ಯಾಪ್ತಿಯ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸೂಚಿಸಲಾಗಿದೆ.

ವಿಶೇಷವಾಗಿ, ಆರೋಗ್ಯ ಸಿಬ್ಬಂದಿಗೆ ಚರ್ಮ ಸಂಬಂಧಿತ ವಿಭಾಗದಲ್ಲಿ, ಮಕ್ಕಳ ಆದಗಪತ್ರೆಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News