ಮುಡಿಪು ರೇಂಜ್; ಕುರ್‌ಆನ್ ವಾಚನ ಸ್ಪರ್ಧಾ ವಿಜೇತರಿಗೆ ಸನ್ಮಾನ
Update: 2022-08-02 19:21 IST
ಮಂಗಳೂರು, ಆ.2: ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಏರ್ಪಡಿಸಿದ ಕುರ್‌ಅನ್ ವಾಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಎಸ್‌ಜೆಎಂ ಮುಡಿಪು ರೇಂಜ್ ವ್ಯಾಪ್ತಿಯ ಸಾಂಬರತೋಟ ಮದ್ರಸದ ವಿದ್ಯಾರ್ಥಿ ಫಾಝಿಲ್ ಹಾಗೂ ತೃತೀಯ ಸ್ಥಾನ ಪಡೆದ ಪಾತೂರು ಸಿ.ಎಂ ನಗರ ವಿದ್ಯಾರ್ಥಿ ಮಿಖ್‌ದಾದ್ ಅವರನ್ನು ಎಸ್‌ಜೆಎಂ ಮುಡಿಪು ರೇಂಜ್ ವತಿಯಿಂದ ಎಸ್‌ಜೆಎಂ ಮುಡಿಪು ರೀಜನಲ್‌ನ ವಾರ್ಷಿಕ ಕೌನ್ಸಿಲ್‌ನಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಮುಡಿಪು ರೇಂಜ್ ಪ್ರಧಾನ ಕಾರ್ಯದರ್ಶಿ ಹೈದರ್ ಅಲಿ ಹಿಮಮಿ ಮುದುಂಗಾರುಕಟ್ಟೆ, ಎಸ್‌ಎಂಎ ಮುಡಿಪು ರೀಜನಲ್ ಉಪಾಧ್ಯಕ್ಷ ಸಿದ್ದೀಕ್ ಸಖಾಫಿ ಮೂಳೂರು, ವಲಯಾಧ್ಯಕ್ಷ ಕೆ.ಪಿ ಅಬೂಬಕರ್ ಹಾಜಿ ಮೋಂಟುಗೋಳಿ, ಎಸ್‌ಎಸ್ ಮೂಸಾ ಹಾಜಿ ಸಾಂಬರತೋಟ, ಅಬ್ಬಾಸ್ ಮದನಿ ಪಾನೇಲ, ಅಬ್ಬಾಸ್ ಸಅದಿ ಪಾತೂರು, ಮುಹಮ್ಮದ್ ಹಾಜಿ ಬದಿಮಾಲೆ ಉಪಸ್ಥಿತರಿದ್ದರು.