ಬೆಂಗಳೂರಿನ ಬೆಳವಣಿಗೆಗೆ ಸಿಂಗಾಪುರವೇ ಮಾದರಿ: ಸಚಿವ ಅಶ್ವತ್ಥ ನಾರಾಯಣ

Update: 2022-08-04 16:30 GMT

ಬೆಂಗಳೂರು, ಆ.4: ಐಟಿ ಮತ್ತು ಬಿಟಿ ವಲಯಗಳಲ್ಲಿ ಬೆಂಗಳೂರು ಇಂದು ಸಾಧಿಸಿರುವ ಅಗಾಧ ಬೆಳವಣಿಗೆಗೆ ಸಿಂಗಾಪುರ ಮಾದರಿಯಾಗಿದ್ದು, ಅಗತ್ಯ ಪ್ರೇರಣೆ ನೀಡುತ್ತ ಬಂದಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಬ್ರಿಗೇಡ್ ಸಮೂಹವು ಸಿಂಗಾಪುರದ ವೆಂಚರ್ ಕ್ಯಾಪಿಟಲ್ ಸಂಸ್ಥೆ ಎಐಸಿ ಜತೆಗೂಡಿ ಕುಂದಲಹಳ್ಳಿಯ ಐಟಿಪಿಎಲ್‍ನಲ್ಲಿ ನಿರ್ಮಿಸಿರುವ ಬ್ರಿಗೇಡ್ ಟೆಕ್ ಗಾರ್ಡನ್ ಕಚೇರಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸುಸ್ಥಿರತೆ, ಗುಣಮಟ್ಟ ಮತ್ತು ಉತ್ಕøಷ್ಟತೆ ಇಂದಿನ ಅಭಿವೃದ್ಧಿಯಲ್ಲಿ ಆಧಾರಸ್ತಂಭಗಳಾಗಿವೆ. ಸಿಂಗಾಪುರ ಮತ್ತು ಬೆಂಗಳೂರಿನ ಸಂಬಂಧ ಮೊದಲಿನಿಂದಲೂ ಸೌಹಾರ್ದದಿಂದ ಕೂಡಿದೆ. ಈಗಾಗಲೇ ನಗರದಲ್ಲಿ ಹಲವು ಹೆಗ್ಗುರುತುಗಳನ್ನು ಹೊಂದಿರುವ ಬ್ರಿಗೇಡ್ ಸಮೂಹವು ನಮ್ಮಲ್ಲಿ ನಾವೀನ್ಯತಾ ಕೇಂದ್ರವನ್ನು ಸ್ಥಾಪಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ಮತ್ತು ಬೆಂಗಳೂರು ಅತ್ಯುತ್ತಮ ಹೂಡಿಕೆ ತಾಣವಾಗಿದ್ದು, ಸಿಂಗಾಪುರದ ಉದ್ಯಮಿಗಳು ಇದನ್ನು ಉಪಯೋಗಿಸಿಕೊಳ್ಳಬೇಕು. ಬೆಂಗಳೂರನ್ನು ಮತ್ತಷ್ಟು ಆಕರ್ಷಕವಾಗಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಮೆಟ್ರೋ ಮತ್ತು ಸಬ್‍ಅರ್ಬನ್ ರೈಲ್ವೆ ಸೌಲಭ್ಯಗಳನ್ನು ವಿಸ್ತರಿಸುತ್ತಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಇದೇ ಸಂದರ್ಭದಲ್ಲಿ ಬೆಂಝ್ ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲಿಸಿದ ಅಶ್ವತ್ಥ ನಾರಾಯಣ, ಅಲ್ಲಿನ ಮೂಲಸೌಲಭ್ಯ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಲಿಂಬಾವಳಿ, ಬ್ರಿಗೇಡ್ ಟೆಕ್ ಗಾರ್ಡನ್ಸ್ ಮುಖ್ಯಸ್ಥ ಜಯಶಂಕರ್, ಮಾಧವ್, ಆ್ಯಂಡಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News